ನಾಲೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

 ಕಾಡುಕೊತ್ತನಹಳ್ಳಿ ಬಳಿ ನಾಲೆ ಕಾಮಗಾರಿಯನ್ನು ಶಾಸಕ ಕದಲೂರು ಉದಯ್ ವಿಕ್ಷೀಸಿದರು. ಬಿ.ಬಸವರಾಜು,ಅಣ್ಣೂರು ರಾಜೀವ್,  ನಂಜುಂಡೇಗೌಡ ಇತರರಿದ್ದರು.
ಕಾಡುಕೊತ್ತನಹಳ್ಳಿ ಬಳಿ ನಾಲೆ ಕಾಮಗಾರಿಯನ್ನು ಶಾಸಕ ಕದಲೂರು ಉದಯ್ ವಿಕ್ಷೀಸಿದರು. ಬಿ.ಬಸವರಾಜು,ಅಣ್ಣೂರು ರಾಜೀವ್, ನಂಜುಂಡೇಗೌಡ ಇತರರಿದ್ದರು.
Published on
ಕೆ.ಎಂ.ದೊಡ್ಡಿ: ಮದ್ದೂರು ವಿಧಾನಸಭಾ ಕ್ಷೇತ್ರದ ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಆಧುನಿಕರಣಗೊಳ್ಳುತ್ತಿರುವ ನಾಲೆ ಕಾಮಗಾರಿಯನ್ನು ಶಾಸಕ ಕದಲೂರು ಉದಯ್ ವಿಕ್ಷೀಸಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಹೆಬ್ಬಕವಾಡಿ, ಸಬ್ಬನಹಳ್ಳಿ, ಯಡಗನಹಳ್ಳಿ, ಗೋಪನಹಳ್ಳಿ, ಕಾಡುಕೊತ್ತನಹಳ್ಳಿ, ಕಪರೆಕೊಪ್ಪಲು, ಭುಜವಳ್ಳಿ, ಯಲಾದಹಳ್ಳಿ, ಬಿದರಹಳ್ಳಿ, ಬಿದರಹೊಸಹಳ್ಳಿ, ಮಣಿಗೆರೆ ಗ್ರಾಮಗಳ ನಾಲೆ ಆಧುನೀಕರಣದ ಬಗ್ಗೆ ರೈತರೊಂದಿಗೆ ಚರ್ಚಿಸಿ ಸಾಧಕ ಭಾದಕಗಳನ್ನು ವಿವರಿಸಿ ಉತ್ತಮ ಕಾಮಗಾರಿ ಮಾಡಲು ಸಹಕರಿಸಿ ಎಂದು ಮನವಿ ಮಾಡಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆಗೂಡಿ ವೀಕ್ಷಣೆ ನಡೆಸಿದ ಶಾಸಕ ಕದಲೂರು ಉದಯ್ ರೈತರ ಹಾಗೂ ಗ್ರಾಮಗಳ ಮುಖಂಡರ ಜೊತೆ ಚಚೆರ್ ನಡೆಸಿ ಮನವಿ ಸ್ವೀಕರಿಸಿದರು.
ನಂತರ ಮಾತನಾಡಿದ ಶಾಸಕರು ಎರಡು-ಮೂರು ತಿಂಗಳ ಅವಧಿಯ ಒಳಗಾಗಿ ನಾಲೆ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ತಲುಪಲು ಅಗತ್ಯವಾದ ತೂಬುಗಳು ಮತ್ತು ಕಿರು ನಾಲೆಗಳನ್ನು ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮದ್ದೂರು ಕ್ಷೇತ್ರದ ರೈತರ ಸರ್ವತೋಮುಖ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸುಮಾರು 800 ಕೋಟಿ ರೂ., ಗೂ ಹೆಚ್ಚಿನ ಹಣವನ್ನು ತಂದು ತಾಲೂಕಿನ ಎಲ್ಲ ಭಾಗದ ನಾಲೆಗಳನ್ನು ಆಧುನಿಕರಣಗೊಳಿಸಿ ಅಭಿವೃದ್ಧಿಪಡಿಸಲಾಗುತ್ತಿದೆ, ನಾಲೆಗಳ ಅಭಿವೃದ್ಧಿಗೆ ರೈತರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ,ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ್, ಸಹಾಯಕ ಅಭಿಯಂತರರಾದ ಅವಿನಾಶ್, ಶಿವಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net