ನಗರಸಭೆ ಸೇರ್ಪಡೆಗೆ ಆಕ್ಷೇಪ ಸಲ್ಲಿಕೆ: ಡಿಸಿಗೆ ಗೆಜ್ಜಲಗೆರೆ ಗ್ರಾಮಸ್ಥರ ಪತ್ರ
ಮದ್ದೂರು ನಗರಸಭೆ ಸೇರ್ಪಡೆ ವಿರೋಧಿಸಿ ಮಂಡ್ಯದಲ್ಲಿ ಗೆಜ್ಜಲಗೆರೆ ಗ್ರಾಮಸ್ಥರು ಆಕ್ಷೇಪಣೆ ಪತ್ರ ಸಲ್ಲಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗೆಜ್ಜಲಗೆರೆಯಿಂದ ಆಗಮಿಸಿದ ಗ್ರಾಮಸ್ಥರು
ಕರಡು ಪ್ರತಿಗೆ ವಿರೋಧವಿದೆ ಎಂದು ಆಕ್ರೋಶ
ಮಂಡ್ಯ: ಮದ್ದೂರು ನಗರಸಭೆಗೆ ತಮ್ಮ ಗ್ರಾಮವನ್ನು ಸೇರ್ಪಡೆ ಮಾಡಿರುವುದಕ್ಕೆ ಗೆಜ್ಜಲಗೆರೆ ಗ್ರಾಮಸ್ಥರು ಆಕ್ಷೇಪಣೆ ಪತ್ರ ಸಲ್ಲಿಸಿದ್ದಾರೆ.
ಗೆಜ್ಜಲಗೆರೆಯಿಂದ ಆಗಮಿಸಿದ ಗ್ರಾಮಸ್ಥರು, ಜಿಲ್ಲಾಧಿಕಾರಿಗೆ ಆಕ್ಷೇಪಣೆ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ರೈತ ನಾಯಕಿ ಸುನಂದಾ ಜಯರಾಂ, ಮದ್ದೂರು ನಗರಸಭೆಗೆ ಗ್ರಾಮಗಳ ಸೇರ್ಪಡೆ ವಿರೋಧಿಸಿ ನೂರು ದಿನಗಳ ಹೋರಾಟ ನಡೆಯುತ್ತಿದೆ. ಆದಾಗ್ಯೂ ಸ್ಥಳಕ್ಕೆ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಸಚಿವರಾಗಲಿ ಭೇಟಿ ನೀಡಿಲ್ಲ ಎಂದು ಕಿಡಿಕಾರಿದರು.
ಕರಡು ಅಧಿಸೂಚನೆಗೆ ಗೆಜ್ಜಲಗೆರೆ ಗ್ರಾಮಸ್ಥರು ಆಕ್ಷೇಪಣೆಯನ್ನು ಸಲ್ಲಿಸುತ್ತಿದ್ದೇವೆ. ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದ್ದು, ಈ ಸಂಬಂಧ ಸೇರ್ಪಡೆಯನ್ನು ಗ್ರಾಮಸ್ಥರು ವಿರೋಧಿಸುತ್ತಿದ್ದೇವೆ. ಗ್ರಾಮವನ್ನು 30 ಮತ್ತು 31 ಎಂಬ ಸಂಖ್ಯೆಯ 2 ವಾರ್ಡ್‌ಗಳನ್ನಾಗಿ ಘೋಷಿಸಿರುವುದನ್ನು ನಾವು ಸಮ್ಮತಿಸುವುದಿಲ್ಲ. ಈ ಸಂಬಂಧ ಹೊರಡಿಸಿರುವ ಕರಡು ಪ್ರತಿಗೆ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿದರು.
ಗ್ರಾಮದ ಮುಖಂಡರಾದ ಜಿ.ಟಿ.ಚಂದ್ರಶೇಖರ್, ಪ್ರತಾಪ್, ವೀರೇಶ್, ನಾರಾಯಣ, ಅನುಪಮಾ, ಚಂದ್ರಶೇಖರ್, ಸತ್ಯವತಿ, ಶಾಂತಮ್ಮ, ಮೋಹನ್ ಇತರರಿದ್ದರು.