ಕೆ.ಹೊನ್ನಲಗೆರೆಯಲ್ಲಿ ಬೋಧಕೇತರ ಸಿಬ್ಬಂದಿಗೆ ಸನ್ಮಾನ

ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿರುವ ಆರ್‌ಕೆ ಶಿಕ್ಷಣ ಸಂಸ್ಥೆಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ, ವಿನಯ್ ರಾಮಕೃಷ್ಣ, ಗವಿಯಪ್ಪ, ತುಕರಾಂ, ಮರಿಸ್ವಾಮಿಗೌಡ, ಮಂಜುಳಾ, ಧನಂಜಯ, ಭಾಗ್ಯಮ್ಮ ಇದ್ದರು.
ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿರುವ ಆರ್‌ಕೆ ಶಿಕ್ಷಣ ಸಂಸ್ಥೆಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ, ವಿನಯ್ ರಾಮಕೃಷ್ಣ, ಗವಿಯಪ್ಪ, ತುಕರಾಂ, ಮರಿಸ್ವಾಮಿಗೌಡ, ಮಂಜುಳಾ, ಧನಂಜಯ, ಭಾಗ್ಯಮ್ಮ ಇದ್ದರು.
Published on
ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ. ಶಿಕ್ಷಣ ಸಂಸ್ಥೆಯಿಂದ ಶನಿವಾರ ಬೋಧಕೇತರ ವರ್ಗದವರನ್ನು ಗೌರವಿಸುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಶೌಚಗೃಹ ಸ್ವಚ್ಛತಾಗಾರರು, ಶಾಲಾ ವಾಹನ ಚಾಲಕರು, ಸಹಾಯಕರು, ಗೇಟ್‌ಕೀಪರ್‌ಗಳನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು. ಅಭಿನಂದನೆ ಸ್ವೀಕರಿಸಿದ 100ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿ ಭಾವುಕರಾದರು.
ಶೌಚಗೃಹ ಸ್ವಚ್ಛತಾಗಾರರಾದ ಮಂಜುಳಾ, ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ವಾಹನದ ಹಿರಿಯ ಚಾಲಕ ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ ಮಾತನಾಡಿದರು. ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಒಟ್ಟುಗೂಡಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಗಿಡ ನೆಟ್ಟರು.
ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ಪಿ.ಶಿವಶಂಕರ್,
ಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ವಲಯ ಅರಣ್ಯಾಧಿಕಾರಿ ಗವಿಯಪ್ಪ, ಶಿಕ್ಷಣ ತಜ್ಞ ತುಕರಾಂ, ಆಡಳಿತಾಧಿಕಾರಿ ಮರಿಸ್ವಾಮಿಗೌಡ, ಪ್ರಾಂಶುಪಾಲ ಸತೀಶ್‌ಬಾಬು, ಹಿರಿಯ ಸಹಾಯಕಿ ಎಚ್.ಜೆ.ಭಾಗ್ಯಮ್ಮ, ಪ್ರವೀಣ್, ರಾಜೇಂದ್ರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net