ಹೈನುಗಾರರ ಅಭಿವೃದ್ಧಿಗೆ ಅಗತ್ಯ ಸೌಲಭ್ಯ

ಕೂಳಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಹೈನುಗಾರರಿಗೆ ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರಗಳ ವಿತರಣೆ ಮತ್ತು ರಾಸುಗಳ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಚಲುವರಾಜು, ಪಿ.ಸಂದರ್ಶ, ಜಯರಾಮ್, ಮನು, ಡಾ.ಮಂಜೇಶ್, ಕಾರ್ತಿಕ್ ಇದ್ದರು.
ಕೂಳಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಹೈನುಗಾರರಿಗೆ ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರಗಳ ವಿತರಣೆ ಮತ್ತು ರಾಸುಗಳ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಚಲುವರಾಜು, ಪಿ.ಸಂದರ್ಶ, ಜಯರಾಮ್, ಮನು, ಡಾ.ಮಂಜೇಶ್, ಕಾರ್ತಿಕ್ ಇದ್ದರು.
Published on
ಮದ್ದೂರು: ಹೈನುಗಾರರಿಗೆ ಅವಶ್ಯಕವಿರುವ ಯಂತ್ರೋಪಕರಣಗಳು ಸಲಕರಣೆಗಳು ಮತ್ತು ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಬೇಕಾಗಿರುವ ಸವಲತ್ತುಗಳನ್ನು ಗಡಿ ಗ್ರಾಮಗಳ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು.
ಮದ್ದೂರು ಪಶು ವೈದ್ಯಕೀಯ ಸೇವೆ ಮತ್ತು ಪಶುಪಾಲನಾ ಇಲಾಖೆ, ಜಿಲ್ಲಾ ಹಾಲು ಒಕ್ಕೂಟ ಹಾಗೂ ಕೂಳಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರಗಳ ವಿತರಣೆ ಮತ್ತು ರಾಸುಗಳ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಈ ಹಿಂದೆ ರಾಜಕೀಯ ಬೆರೆಸುವ ಮೂಲಕ ಅವರಿಗೆ ಬೇಕಾದವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡು ಕೆಲವೇ ಷೇರುದಾರರಿಗೆ ಮಾತ್ರ ಸವಲತ್ತುಗಳು ಅವರ ಪಾಲಾಗುತ್ತಿದ್ದವು. ಆದರೆ, ಇಂತಹ ಭ್ರಷ್ಟ ವ್ಯವಸ್ಥೆಗಳಿಗೆ ತಿಲಾಂಜಲಿ ಇಡುವ ಮೂಲಕ ಪ್ರಾಮಾಣಿಕ ಷೇರುದಾರರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕೆಂಬ ಉದ್ದೇಶದಿಂದ ಸಹಕಾರ ಸಂಘಗಳಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.
ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು, ಕೃಷಿ ಜತೆಗೆ ಹೈನುಗಾರಿಕೆಯನ್ನು ಕೂಡ ರೈತರು ಅಳವಡಿಸಿಕೊಳ್ಳಬೇಕು. ಹೈನುಗಾರಿಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ. ರೈತರು ಸಕಾಲಕ್ಕೆ ರಾಸುಗಳ ಆರೋಗ್ಯ ತಪಾಸಣೆ ಮಾಡಿಸಿ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ಕೊಡಬೇಕು ಎಂದು ಶಾಸಕ ಉದಯ್ ಸಲಹೆ ನೀಡಿದರು.
ಮನ್ ಮುಲ್ ನಿರ್ದೇಶಕ ಹರೀಶ್ ಬಾಬು ಮಾತನಾಡಿ, ಹೈನೋದ್ಯಮವು ಜಿಲ್ಲೆಯ ಜೀವನಾಡಿಯಾಗಿದ್ದು, ರೈತ ಕುಟುಂಬಗಳ ಬೆನ್ನೆಲುಬಾಗಿದೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ರೈತರ ಪ್ರಮುಖ ಆದಾಯ ಮೂಲವಾಗಿದೆ. ಹೈನೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಹೈನುಗಾರಿಕೆ ಜತೆಗೆ ಉಪ ಕಸುಬಾಗಿ ಕುರಿ, ಮೇಕೆ ಸಾಕಬೇಕು. ಇದರಿಂದ ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸಬಹುದು ಎಂದು ಕಿವಿಮಾತು ಹೇಳಿದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ಗೋವಿಂದ್ ಮಾತನಾಡಿ, ರೈತರ ಕೃಷಿ ಭೂಮಿಯ ಫಲವತ್ತತೆಗೆ ಜಾನುವಾರುಗಳು ಅತಿ ಮುಖ್ಯ. ಚಿಕಿತ್ಸಾ ಶಿಬಿರಗಳು ರಾಸುಗಳ ಆರೋಗ್ಯ ವೃದ್ಧಿಸಲು ಸಹಕಾರಿಯಾಗಲಿದೆ. ಇತ್ತಿಚಿನ ದಿನಗಳಲ್ಲಿ ರಾಸುಗಳನ್ನು ಸಾಕುವುದು ರೈತರಿಗೆ ದೊಡ್ಡ ಸವಾಲಾಗಿದೆ. ಆಧುನಿಕ ಪದ್ಧತಿಯಲ್ಲಿ ಪಶು ಸಂಗೋಪನೆ ಮಾಡಿದರೆ ರಾಸುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯವಂತ ಕರುಗಳನ್ನು ಪಡೆಯುವ ಜತೆಗೆ ಹಾಲಿನ ಉತ್ಪಾದನೆಯೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ 17 ಮಂದಿ ರೈತರಿಗೆ ಮೇವು ಕತ್ತರಿಸುವ ಯಂತ್ರ, 70 ಮಂದಿಗೆ ರಬ್ಬರ್ ಮ್ಯಾಟ್ ಹಾಗೂ 8 ಮಂದಿ ರೈತರಿಗೆ ಹಾಲು ಕರೆಯುವ ಯಂತ್ರಗಳನ್ನು ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಜಯರಾಂ, ಅರೆ ತಿಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮನು, ಮನ್ ಮುಲ್ ಉಪ ವ್ಯವಸ್ಥಾಪಕ ಡಾ.ಮಂಜೇಶ್, ಪಶು ವೈದ್ಯರಾದ ಕಾರ್ತಿಕ್, ಹನುಮಂತು, ನೂತನ್, ಹೊನ್ನೇಶ್, ಮಂಜೇಶ್, ವಿಸ್ತರಣಾಧಿಕಾರಿ ಮಂಜುನಾಥ್ ಕೆಡಿಪಿ ಸದಸ್ಯರಾದ ಸಿದ್ದರಾಜು ಕೃಷ್ಣ, ಸಿದ್ದೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net