ಸೃಜನಶೀಲತೆಗೆ ವೇದಿಕೆಯಾದ ನೆಕ್ಸೋವೇಟ್: ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜನೆ

ಮಂಡ್ಯ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ನೆಕ್ಸೋವೇಟ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮಂಡ್ಯ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ನೆಕ್ಸೋವೇಟ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮೂರು ವಿಭಾಗದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆ
  • ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಕಾಲೇಜಿನಿಂದ ಭಾಗಿ
ಮಂಡ್ಯ: ನಗರದ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ ಎರಡು ದಿನದ ರಾಷ್ಟ್ರಮಟ್ಟದ ನೆಕ್ಸೋವೇಟ್ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಈ ಮೂಲಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮಲ್ಲಿರುವ ಸೃಜನಶೀಲತೆಯನ್ನು ಅನಾವರಣಗೊಳಿಸಲು ಸಾಧ್ಯವಾಯಿತು.
ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ದೂರದೃಷ್ಟಿ ಹಾಗೂ ರಾಷ್ಟ್ರ ನಿರ್ಮಾಣದ ಚಿಂತನೆಯ ಫಲವಾಗಿ ಸ್ಥಾಪಿತವಾದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿ ವಿನೂತನ ಕಾರ್ಯಕ್ರಮ, ಸ್ಪರ್ಧೆ ಆಯೋಜಿಸಲಾಗುತ್ತಿರುತ್ತದೆ. ಅದೇ ರೀತಿ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹೊಸ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ನೆಕ್ಸೋವೇಟ್ ಹೆಸರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಿತು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಾಂಶುಪಾಲ ಡಾ.ಎನ್.ಎಲ್.ಮುರಳಿಕೃಷ್ಣ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್ ಭಾಗವಹಿಸಿದ್ದರು.

ಏನಿದು ನೆಕ್ಸೋವೇಟ್ ಸ್ಪರ್ಧೆ?: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ, ನವೀನತೆ, ಉದ್ಯಮಶೀಲತೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಹಾಗೂ ತಂಡ ಸಹಕಾರ ಮನೋಭಾವವನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಟ್ರಾೃಕ್ ಮಾದರಿಯಲ್ಲಿ ಸ್ಪರ್ಧೆ ನಡೆಯಿತು. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನಿಂದಲೂ ತಂಡ ಭಾಗವಹಿಸಿದ್ದವು.

ಟ್ರಾೃಕ್ ‘ಎ’ ವಿಭಾಗದಲ್ಲಿ ಹ್ಯಾಕ್ಸ್‌ಪ್ರಿಂಟ್ 6.0 24 ಗಂಟೆಯ ರಾಷ್ಟ್ರಮಟ್ಟದ ಡೆವಲಪ್‌ಮೆಂಟ್ ಮ್ಯಾರಥಾನ್ ಆಗಿತ್ತು. ಮೆಷಿನ್ ಲರ್ನಿಂಗ್, ಅಗ್ರಿಟೆಕ್ ಹಾಗೂ ಹೆಲ್ತ್‌ಟೆಕ್ ಸೇರಿದಂತೆ ವಿವಿಧ ಕ್ಷೇತ್ರದ ಸಾಮಾಜಿಕ, ಆರ್ಥಿಕ ಮತ್ತು ಕೈಗಾರಿಕಾ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಯ ಮಾದರಿಗಳನ್ನು ರೂಪಿಸುವ ಉದ್ದೇಶವಾಗಿತ್ತು. ಈ ಸ್ಪರ್ಧೆಯಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ 120 ವಿದ್ಯಾರ್ಥಿಗಳು (31 ತಂಡ ), ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಕಾಲೇಜಿನಿಂದ 181 ವಿದ್ಯಾರ್ಥಿಗಳು (50 ತಂಡ ) ಭಾಗವಹಿಸಿದರು. ಒಟ್ಟು 81 ತಂಡ ಎರಡು ರಾಜ್ಯದಿಂದ ಪಾಲ್ಗೊಂಡು ಸ್ಪರ್ಧೆಗೆ ಮೆರಗು ನೀಡಿದರು.
ಟ್ರಾೃಕ್ ‘ಬಿ’ ವಿಭಾಗದಲ್ಲಿ ರೋಬೋ ರೇಸ್, ರೋಬೋ ಸಾಕರ್, ಸುಮೋ, ಲೈನ್ ಫಾಲೋವರ್, ಮೇಜ್ ವಿಶೇಷ ತಾಂತ್ರಿಕ ಸ್ಪರ್ಧೆ ನಡೆದವು. ಈ ವಿಭಾಗದಲ್ಲಿ ವಿದ್ಯಾರ್ಥಿಗಳು ರೋಬೋಟ್ ವಿನ್ಯಾಸ, ನಿರ್ಮಾಣ, ನಿಯಂತ್ರಣ ಹಾಗೂ ಸ್ವಯಂಚಾಲಿತ ವ್ಯವಸ್ಥೆಗಳ ಅಭಿವೃದ್ಧಿಯ ಮೂಲಕ ತಮ್ಮ ತಾಂತ್ರಿಕ ಕೌಶಲ, ಪ್ರೋಗ್ರಾಮಿಂಗ್ ಸಾಮರ್ಥ್ಯ ಮತ್ತು ಇಂಜಿನಿಯರಿಂಗ್ ನೈಪುಣ್ಯ ಪ್ರದರ್ಶಿಸಿದರು. ಟ್ರಾೃಕ್ ‘ಸಿ’ ವಿಭಾಗದಲ್ಲಿ ರ‌್ಯಾಪಿಡ್ ಬ್ರಾೃಂಡ್ ರಬ್ಲಿಂಗ್, ಶಾರ್ಕ್ ಟ್ಯಾಂಕ್, ಐಕ್ಯೂ ವಾರ್ಸ್ 2.0 ಹಾಗೂ ವಾಟರ್ ರಾಕೆಟ್ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವಿಭಾಗದಲ್ಲಿ ವಿದ್ಯಾರ್ಥಿಗಳು ಸೃಜನಶೀಲತೆ, ಉದ್ಯಮಶೀಲತೆ, ಬ್ರ್ಯಾಂಡ್ ವಿನ್ಯಾಸ, ಸಮಸ್ಯೆ ಪರಿಹಾರ ಸಾಮರ್ಥ್ಯ, ತ್ವರಿತ ಚಿಂತನೆ ಹಾಗೂ ನವೀನ ಆಲೋಚನೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕೌಶಲ ಪ್ರದರ್ಶಿಸಿದರು. ಈ ಎರಡು ಸ್ಪರ್ಧೆಯಲ್ಲಿ ಒಟ್ಟು 627 ವಿದ್ಯಾರ್ಥಿಗಳು ಮತ್ತು 191 ತಂಡಗಳು ಭಾಗವಹಿಸಿದ್ದರು.

ವಿವಿಧ ಸ್ಪರ್ಧೆ ವಿಜೇತರು
ಎಐ ವಿಭಾಗ- ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜು(ಪ್ರ), ಬೆಂಗಳೂರಿನ ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ದ್ವಿ), ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ತೃ), ಅಗ್ರಿಟೆಕ್ ವಿಭಾಗ-ಮೈಸೂರು ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್(ಪ್ರ), ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜು(ದ್ವಿ), ಜಿಎಂಐಟಿ ಕಾಲೇಜು(ತೃ), ಐಒಟಿ ವಿಭಾಗ-ಎಸ್‌ಜೆಸಿಇ ಕಾಲೇಜು(ಪ್ರ), ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ದ್ವಿ) ಮತ್ತು ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜು(ತೃ) ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net