ಜ.25ರಿಂದ ನಾಲ್ಕು ದಿನ ರಾಷ್ಟ್ರೀಯ ಸಮ್ಮೇಳನ: ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾಹಿತಿ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜನವಾದಿ ಮಹಿಳಾ ಸಂಘಟನೆ
  • ಹೈದರಾಬಾದ್‌ನಲ್ಲಿ 14ನೇ ರಾಷ್ಟ್ರೀಯ ಸಮ್ಮೇಳನ
  • ಕರ್ನಾಟಕದಿಂದ 25 ಜನ ಪ್ರತಿನಿಧಿ ಭಾಗಿ
ಮಂಡ್ಯ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಸಮ್ಮೇಳನ ಜ.25ರಿಂದ 28ರವರೆಗೆ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದರು.
ಸಮಾಜದಲ್ಲಿ ಮಹಿಳೆಯರನ್ನು 2ನೇ ದರ್ಜೆ ಪ್ರಜೆಯಾಗಿ ಕಾಣಲಾಗುತ್ತಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ‘ಸಾಮ್ರಾಜ್ಯಶಾಹಿ ವಿರೋಧಿಸಿ, ಮನುವಾದವನ್ನ ಧಿಕ್ಕರಿಸಿ, ಮಹಿಳಾ ಹಕ್ಕುಗಳನ್ನ ಎತ್ತಿ ಹಿಡಿಯೋಣ’ ಘೋಷಣೆಯೊಂದಿಗೆ 14ನೇ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದ 26 ರಾಜ್ಯಗಳಲ್ಲಿ ಸಂಘಟನೆಯ ಸದಸ್ಯರಿದ್ದಾರೆ. ಒಂದು ಕೋಟಿಗೂ ಅಧಿಕ ಸದಸ್ಯರನ್ನು ಹೊಂದಲಾಗಿದೆ. ಎಲ್ಲ ರಾಜ್ಯಗಳಿಂದ 900ಕ್ಕೂ ಹೆಚ್ಚು ಸಂಘಟನೆಯ ಪ್ರತಿನಿಧಿಗಳು, ವೀಕ್ಷಕರು ಭಾಗವಹಿಸುವರು. ಜಿಲ್ಲೆಯಿಂದ ಆರು ಜನ ಸೇರಿದಂತೆ ರಾಜ್ಯದಿಂದ 25 ಪ್ರತಿನಿಧಿಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಮಂಜುಳಾ, ವಿಶಾಲು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net