ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಡಿ.ಮಲ್ಲಿಗೆರೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ಹರಿಸೇವೆ ಮತ್ತು ಪರಿವಾರ ದೇವರುಗಗಳ ಉತ್ಸವದ ಅಂಗವಾಗಿ ಶ್ರೀ ಮದ್ದನಟ್ಟಮ್ಮ, ಶ್ರೀ ಪಟ್ಟಲದಮ್ಮ, ಶ್ರೀ ಹಳೇವೂರಮ್ಮ ದೇವರಿಗೆ ವಿಶೇಷ ಅಲಂಕಾರ ಮಾಡಿರುವುದು.
Published on:
Copied
Follow Us
ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯ ಡಿ.ಮಲ್ಲಿಗೆರೆ ಗ್ರಾಮದ ಮುತ್ತುರಾಯಸ್ವಾಮಿ ಹರಿಸೇವೆ ಶನಿವಾರ ಸಂಭ್ರಮದಿಂದ ನೆರವೇರಿತು.
ಶ್ರೀ ಮುತ್ತುರಾಯಸ್ವಾಮಿ ಹರಿಸೇವೆಯ ಪ್ರಯುಕ್ತ ಮಧ್ಯಾಹ್ನ ಸಹಸ್ರಾರು ಭಕ್ತರಿಂದ ಮಾಂಸದೂಟ ಏರ್ಪಸಲಾಗಿತ್ತು. ಡಿ.ಮಲ್ಲಿಗೆರೆ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿ ಭಕ್ತರು ಮಾಂಸದೂಟ ಸವಿದರು.
ಉತ್ಸವದ ಅಂಗವಾಗಿ ದೇಗುಲದಲ್ಲಿ ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ವಿದಧ ಪೂಜೆ ನೆರವೇರಿತು.
ಬುಧವಾರವವೂ ಶ್ರೀ ಆಂಜನೇಯಸ್ವಾಮಿ ಹರಿಸೇವೆ ಮತ್ತು ದೇವರು ಉತ್ಸವ ಅದ್ದೂರಿಯಾಗಿ ನೆರವೇರಿತು ಹಾಗೂ ಸಹಸ್ರಾರು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಸೋಮವಾರ ಶ್ರೀ ಬಸವಣ್ಣ ದೇವರ ಹರಿಸೇವೆ ಏರ್ಪಡಿಲಾಗಿದ್ದು, ಹರಿಸೇವೆ ಪ್ರಯುಕ್ತ ಸಂಜೆ 4 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಲಾಗಿದೆ. ಭಕ್ತಾರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಮದ್ದೇನ ಲಕ್ಷ್ಮೀದೇವಿ ದೇವಸ್ಥಾನ ಅಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ಡಿ.ಮಲ್ಲಿಗೆರೆ ಗ್ರಾಮಸ್ಥರು ಕೋರಿದ್ದಾರೆ.