ಮಾ.11ರಂದು ರಾತ್ರಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಮಹೇಂದ್ರ ಅವರು ತಾಲೂಕು ವಕೀಲರ ಸಂಘದ ಪದಾಧಿಕಾರಿಗಳ ಜತೆಗೂಡಿ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ್ದರು. ವಸತಿ ನಿಲಯದ ಸಮಸ್ಯೆಗಳು, ಪ್ರಾಂಶುಪಾಲ ಮತ್ತು ಕೆಲವು ಶಿಕ್ಷಕರು ನಿಲಯದಲ್ಲಿ ವಾಸ್ತವ್ಯ ಇಲ್ಲದಿರುವುದು, ಕೆಲ ವಿದ್ಯಾರ್ಥಿಗಳು ಮದ್ಯಪಾನ ಮಾಡಿ ನಿಲಯಕ್ಕೆ ಬರುವುದರ ಕುರಿತು ವಿದ್ಯಾರ್ಥಿಗಳು ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದರು. ನಂತರ ವಸತಿನಿಲಯದಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದಂತೆ ತಾಲೂಕು ಕಾನೂನು ಸೇವೆಗಳ ಸಮಿತಿಗೆ ದೂರು ರವಾನೆಯಾಗಿತ್ತು.