ಬೈಕ್‌ಗೆ ವಾಹನ ಡಿಕ್ಕಿ ಸವಾರ ಸಾವು

ಎಂ.ಆರ್.ಮಧು
ಎಂ.ಆರ್.ಮಧು
Published on
ಮಳವಳ್ಳಿ: ತಾಲೂಕಿನ ಟಿ.ಕಾಗೇಪುರ ಸಮೀಪ ಮದ್ದೂರು ಮಳವಳ್ಳಿ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಅಪರಿಚಿತ ವಾಹನ ವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪಟ್ಟಣದ ಗಂಗಾಮತ ಬಡಾವಣೆಯ ರಾಜಣ್ಣ ಎಂಬುವರ ಪುತ್ರ ಎಂ.ಆರ್.ಮಧು(33) ಮೃತ ಬೈಕ್ ಸವಾರ. ಗೂಡ್ಸ್ ವಾಹನ ಚಾಲಕನಾಗಿದ್ದ ಈತನಿಗೆ ಇತ್ತೀಚೆಗೆ ವಿವಾಹವಾಗಿತ್ತು. ಮಂಡ್ಯದಲ್ಲಿನ ತನ್ನ ಪತ್ನಿ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಟಿ. ಕಾಗೇಪುರ ಗ್ರಾಮದ ಬಳಿ ಅಪರಿಚಿತ ವಾಹನದ ನಡುವೆ ನಡೆದಿರುವ ಅಪಘಾತದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ಮಧು ತಲೆಯ ಮೇಲೆ ಚಕ್ರ ಹರಿದು ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ . ಕೆಲ ಸಮಯದ ನಂತರ ದಾರಿಹೋಕರು ಅಪಘಾತದ ನಡೆಡಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಧಾವಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಿದ್ದು, ಭಾನುವಾರ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net