ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಕಾನೂನು ಹೋರಾಟ ಮಾಡುತ್ತಿದೆ. ಆದರೆ ಕಾವೇರಿ ಬೋರ್ಡ್‌ನಲ್ಲಿ ತೀರ್ಮಾನ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ. ಅವರ ಪಾಲಿನ ನೀರು ಕೇಳಿಕೊಳ್ಳಲಿ, ನಾವು ಕೂಡ ಕೊಡುತ್ತಿದ್ದೇವೆ. ನಮ್ಮ ಜಾಗದಲ್ಲಿ ಡ್ಯಾಂ ಕಟ್ಟುವುದನ್ನು ತಡೆಯುವ ಹಕ್ಕು ಅವರಿಗಿಲ್ಲ ಎಂದರು.