ಈ ವೇಳೆ ಮಾತನಾಡಿದ ಅವರು, ಅಮೇರಿಕಾ ಮತ್ತು ಇರಾನ್ ಸೇರಿದಂತೆ ಹಲವು ರಾಷ್ಟ್ರಗಳ ನಡುವೆ ಕಳೆದ ಒಂದೂವರೆ ತಿಂಗಳಿಂದ ನಡೆಯುತ್ತಿರುವ ಯುದ್ಧದಿಂದ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸಮರ್ಪಕ ಗ್ಯಾಸ್ ದೊರೆಯದೇ ಆಟೋ ಚಾಲಕರು ಜೀವನ ನಡೆಸಲು ದುಸ್ಥರಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ನೈತಿಕ ಧೈರ್ಯ ತುಂಬಲು ಫುಡ್‌ಕಿಟ್ ಹಾಗೂ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.