ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಚಾಲನೆ

ಕೆ.ಆರ್.ಸಾಗರ  ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮ ಮತ್ತು  ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಸ್ತೆ ಮತ್ತು ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಇತ್ತೀಚೆಗೆ ಚಾಲನೆ ನೀಡಿದರು. ಚೇತನಾ ಯಾದವ್, ಜಯಂತ್, ಫಾರೂಕು ಅಭು, ಕಿಶೋರ್‌ಕುಮಾರ್, ಶಿವಪ್ರಕಾಶ್, ಶ್ವೇತಾ, ಚಂದ್ರು ಇತರರಿದ್ದರು.
ಕೆ.ಆರ್.ಸಾಗರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮ ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಸ್ತೆ ಮತ್ತು ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಇತ್ತೀಚೆಗೆ ಚಾಲನೆ ನೀಡಿದರು. ಚೇತನಾ ಯಾದವ್, ಜಯಂತ್, ಫಾರೂಕು ಅಭು, ಕಿಶೋರ್‌ಕುಮಾರ್, ಶಿವಪ್ರಕಾಶ್, ಶ್ವೇತಾ, ಚಂದ್ರು ಇತರರಿದ್ದರು.
Published on
ಕೆ.ಆರ್.ಸಾಗರ: ಕೃಷ್ಣರಾಜ ಸಾಗರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮ ಮತ್ತು ಮೈಸೂರು ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ರಸ್ತೆ ಮತ್ತು ಚರಂಡಿ ನಿರ್ಮಾಣ ಸೇರಿದಂತೆ, ವಿವಿಧ ಕಾಮಗಾರಿಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು.
ಮೈಸೂರು ಅಭಿವೃದ್ದಿ ಪ್ರಾಧಿಕಾರದ ವತಿಯಿಂದ 3 ಕೋಟಿ ರೂ.ವೆಚ್ಚದಲ್ಲಿ ಕೃಷ್ಣರಾಜ ಸಾಗರ ಗ್ರಾಮದ ಪರಿಮಿತಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ, 5 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ರೈಲ್ವೆ ನಿಲ್ದಾಣ ರಸ್ತೆ ಮತ್ತು ಗ್ರಾಮದ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, 40 ಲಕ್ಷ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿ, 47.50 ಲಕ್ಷ ರೂ ವೆಚ್ಚದಲ್ಲಿ ಕೃಷ್ಣರಾಜ ಸಾಗರದ ಸಂತೆಮಾಳದಲ್ಲಿ ಅತ್ಯಾಧುನಿಕ ಬಸ್ ತಂಗುದಾಣ ಕಾಮಗಾರಿ, 33 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲಧಾರೆ ಯೋಜನೆಯಡಿಯಲ್ಲಿ 28 ಹಳ್ಳಿಗಳಿಗೆ ಶುಧ್ದ ಕುಡಿಯುವ ನೀರು ಸರಬರಾಜು ಕಾಮಗಾರಿ ಯೋಜನೆ ಮತ್ತು 5 ಕೋಟಿ ರೂ. ವೆಚ್ಚದಲ್ಲಿ ಕೃಷ್ಣರಾಜ ಸಾಗರದ ಅರಳಿಕಟ್ಟೆ ವೃತ್ತದಲ್ಲಿ 26 ಅಡಿ ಎತ್ತರದ ದೊಡ್ಡಗಡಿಯಾರ ಕಾಮಗಾರಿಗಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಇತ್ತೀಚೆಗೆ ಭೂಮಿಪೂಜೆ ಆಡಿ ಚಾಲನೆ ನೀಡಿದರು.
ಕೃಷ್ಣರಾಜ ಸಾಗರ ಗ್ರಾಮದ ಪ್ರವೇಶ ದ್ವಾರಕ್ಕೆ ಆಗಮಿಸಿದ ಶಾಸಕರಿಗೆ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ನೀಡಿದರು. ನಂತರ ಸಂತೆಮಾಳದಲ್ಲಿಂದ ಅರಳಿಕಟ್ಟೆ ತನಕ ಎತ್ತಿನಗಾಡಿ ಮೂಲಕ ಶಾಸಕರು ಮೆರವಣಿಗೆಯಲ್ಲಿ ತೆರಳಿದರು. ಅರಳಿಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕ್ರೇನ್ ಮೂಲಕ ಸುಮಾರು 30 ಕ್ವಿಂಟಾಲ್ ಬೆಲ್ಲದ ಹಾರ ಹಾಕಿ ಸ್ವಾಗತಿಸಿದರು.
ತಹಸೀಲ್ದಾರ್ ಚೇತನಾ ಯಾದವ್, ಕೆ.ಆರ್.ಸಾಗರ ಕಾರ್ಯಪಾಲಕ ಇಂಜಿನಿಯರ್ ಜಯಂತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕು ಅಭು, ಕಿಶೋರ್‌ಕುಮಾರ್, ಶಿವಪ್ರಕಾಶ್, ಶ್ವೇತಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೌಮ್ಯಾ, ಕೆ.ಆರ್.ಸಾಗರ ಗ್ರಾಪಂ ಆಡಳಿತಾಧಿಕಾರಿ ಪ್ರವೀಣ್, ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಮಾಜಿ ಸದಸ್ಯರಾದ ಜಗದೀಪ್ ಸಿಂಗ್, ದೇವರಾಜು, ರವಿಕುಮಾರ್, ವೆಂಕಟೇಶ್, ಸುನೀಲ್‌ಕುಮಾರ, ಮುಖಂಡರಾದ ಜಗದೀಶ್, ಚಾರ್ಸಿ ಶಂಕರ್, ಸೋಮಣ್ಣ, ಮನು, ನಂಜುಂಡ, ಸುಮಿತ್ರಾ ಮತ್ತು ಗ್ರಾಮದ ಮುಖಂಡರು, ಗ್ರಾಮಸ್ಥರು ಇದ್ದರು.
ಬೆಲ್ಲದ ಹಾರಕ್ಕೆ ಮುಗಿ ಬಿದ್ದರು: ಕೃಷ್ಣರಾಜಸಾಗರ ಗ್ರಾಮದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಸ್ವಾಗತ ಕೋರಲು ಕ್ರೇನ್ ಮೂಲಕ ಹಾಕಿದ ಸುಮಾರು 30 ಕ್ವಿಂಟಾಲ್ ಬೆಲ್ಲದ ಹಾರವನ್ನು ಹಾಕಿದರು. ಬೆಲ್ಲದ ಹಾರ ಕೆಳಗೆ ಇಳಿಸುತ್ತಿದ್ದಂತೆ ಬೆಲ್ಲಗಳಿಗೆ ಅಲ್ಲಿದ್ದ ಸಾರ್ವಜನಿಕರು ಮುಗಿದು ಬಿದ್ದು ಕೈಗೆ ಸಿಕ್ಕಷ್ಟು ಬೆಲ್ಲ ಕಿತ್ತೊಯ್ಯುತ್ತಿದ್ದ ದೃಶ್ಯ ಕಂಡುಬಂತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net