ಇದಲ್ಲದೆ, ಶ್ರೀರಂಗಪಟ್ಟಣದಲ್ಲಿನ ರೈಲ್ವೆ ನಿಲ್ದಾಣವನ್ನು ತುರ್ತಾಗಿ ಮೇಲ್ದರ್ಜೆಗೇರಿಸಬೇಕಿದೆ. ಜತೆಗೆ ಪ್ಲಾಟ್ ಫಾರ್ಮ್ ವಿಸ್ತರಣೆ ಮಾಡಬೇಕು. ಬಹುಮುಖ್ಯವಾಗಿ ಕೆಲ ರೈಲುಗಳ ನಿಲುಗಡೆಗೆ ಕ್ರಮವಹಿಸಬೇಕು. ಇದರಿಂದ ಪ್ರತಿನಿತ್ಯ ಸಾವಿರಾರೂ ಜನ ಪ್ರಯಾಣಿಕರಿಗೆ ಉಪಯೋಗವಾಗಲಿದೆ. ಇನ್ನು ಇಂಡುವಾಳು ಗ್ರಾಮದಲ್ಲಿ ಕೆಳ ಸೇತುವೆ ಮಾಡಿಕೊಡಬೇಕು. ಯಲಿಯೂರು ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ರೈಲ್ವೆ ಜಾಗವನ್ನು ಬಿಟ್ಟುಕೊಡಬೇಕು. ಜತೆಗೆ ರೈಲ್ವೆ ಗೂಡ್ಸ್ ಸ್ಟೇಷನ್ ಯಲಿಯೂರು ಗ್ರಾಮದಲ್ಲಿಯೇ ಸ್ದಾಪಿಸಬೇಕೆಂದು ಸಚ್ಚಿದಾನಂದ ಕೇಳಿಕೊಂಡಿದ್ದಾರೆ. ಪತ್ರಕ್ಕೆ ಪ್ರತ್ಯುತ್ತರ ನೀಡಿರುವ ಸಚಿವ ವಿ.ಸೋಮಣ್ಣ, ಸಮಸ್ಯೆಗೆ ಸಂಬಂಧಿಸಿದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.