ತೆಂಗಿನಮರಕ್ಕೆ ಬೇರಿನಿಂದ ಔಷಧ ನೀಡುವಿಕೆ ಪರಿಣಾಮಕಾರಿ ವಿಧಾನ

ಮೇಲುಕೋಟೆ ಹೋಬಳಿಯ ಕನಗೋನಹಳ್ಳಿಯಲ್ಲಿ ಮಂಡ್ಯದ ಕೃಷಿ ವಿವಿ ವಿದ್ಯಾರ್ಥಿನಿ ಅನನ್ಯಾ ಮತ್ತು ತಂಡದ ವಿದ್ಯಾರ್ಥಿಗಳು ತೆಂಗಿನಲ್ಲಿ ಬೇರು ಮೂಲಕ ಔಷಧ ನೀಡುವಿಕೆ ಕೀಟ ಮತ್ತು ರೋಗ ನಿರ್ವಹಣೆಗೆ ಪರಿಣಾಮಕಾರಿ ವಿಧಾನ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಮೇಲುಕೋಟೆ ಹೋಬಳಿಯ ಕನಗೋನಹಳ್ಳಿಯಲ್ಲಿ ಮಂಡ್ಯದ ಕೃಷಿ ವಿವಿ ವಿದ್ಯಾರ್ಥಿನಿ ಅನನ್ಯಾ ಮತ್ತು ತಂಡದ ವಿದ್ಯಾರ್ಥಿಗಳು ತೆಂಗಿನಲ್ಲಿ ಬೇರು ಮೂಲಕ ಔಷಧ ನೀಡುವಿಕೆ ಕೀಟ ಮತ್ತು ರೋಗ ನಿರ್ವಹಣೆಗೆ ಪರಿಣಾಮಕಾರಿ ವಿಧಾನ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
Published on
ಮೇಲುಕೋಟೆ: ತೆಂಗಿನಮರಕ್ಕೆ ಬೇರು ಪೋಷಣೆ ಮಾಡಲು ಮರಕ್ಕೆ ಕನಿಷ್ಠ ಏಳೂವರೆ ವರ್ಷಗಳಾಗಿರಬೇಕು ಎಂದು ಕೃಷಿ ವಿದ್ಯಾರ್ಥಿ ಅನನ್ಯ ಹಾಗೂ ಪ್ರಜ್ವಲ್ ತಿಳಿಸಿದರು.
ಅವರು ಮೇಲುಕೋಟೆ ಹೋಬಳಿ ಕನಗೋನಹಳ್ಳಿ ಗ್ರಾಮದಲ್ಲಿ ಮಂಡ್ಯದ ವಿ.ಸಿ.ಫಾರ್ಮ್ ವತಿಯಿಂದ ನಡೆಯುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ‘ತೆಂಗಿನಲ್ಲಿ ಬೇರು ಮೂಲಕ ಔಷಧ ನೀಡುವಿಕೆ ಕೀಟ ಮತ್ತು ರೋಗ ನಿರ್ವಹಣೆಗೆ ಪರಿಣಾಮಕಾರಿ ವಿಧಾನ’ ಕುರಿತು ಇತ್ತೀಚೆಗೆ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಕೃಷಿ ವಿಜ್ಞಾನಿಗಳಾದ ಡಾ.ವಿಜಯ್ ಕುಮಾರ್, ಡಾ.ಹರಿಪ್ರಸಾದ್ ಹಾಗೂ ಡಾ. ನಾಗಪ್ಪ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.
ತೆಂಗಿನಮರದಲ್ಲಿ ಕೆಲವು ಕೀಟ ಹಾಗೂ ರೋಗಗಳ ತೀವ್ರ ಬಾಧೆ ಕಂಡುಬಂದಾಗ ಬೇರು ಮೂಲಕ ಔಷಧ ನೀಡುವಿಕೆ ಒಂದು ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನದಲ್ಲಿ ಆಯ್ದ ಜೀವಂತ ಬೇರಿನ ಮೂಲಕ ಔಷಧನ್ನು ಮರದೊಳಗೆ ಹೀರಿಕೊಳ್ಳುವಂತೆ ಮಾಡಲಾಗುತ್ತದೆ. ಕಾಂಡದಿಂದ ಸುಮಾರು ಒಂದು ಮೀಟರ್ ದೂರದಲ್ಲಿರುವ, ಪೆನ್ಸಿಲ್ ದಪ್ಪದ, ಆರೋಗ್ಯಕರ ಹಾಗೂ ಕಂದುಬಣ್ಣದ ಜೀವಂತ ಬೇರನ್ನು ಆಯ್ಕೆ ಮಾಡಬೇಕು. ಬೇರಿನ ತುದಿಯನ್ನು ಚೂಪಾದ ಚಾಕುವಿನಿಂದ ಸುಮಾರು 45 ಡಿಗ್ರಿ ಕೋನದಲ್ಲಿ ಕತ್ತರಿಸಬೇಕು, ಶಿಫಾರಸು ಮಾಡಿದ ಔಷಧವನ್ನು ನೀರಿನೊಂದಿಗೆ ಬೆರೆಸಿ ಪಾಲಿಥೀನ್ ಚೀಲದಲ್ಲಿ ಹಾಕಬೇಕು. ಕತ್ತರಿಸಿದ ಬೇರಿನ ತುದಿಯನ್ನು ಔಷಧಿಯ ದ್ರಾವಣದಲ್ಲಿ ಮುಳುಗಿಸಿ ಚೀಲದ ಬಾಯಿಯನ್ನು ದಾರದಿಂದ ಬಿಗಿಯಾಗಿ ಕಟ್ಟಿ ಬೇರು ಮತ್ತು ಚೀಲಕ್ಕೆ ಯಾವುದೇ ಹಾನಿಯಾಗದಂತೆ ಮಣ್ಣಿನಿಂದ ಅಥವಾ ಎಲೆಗಳ ಹೊದಿಕೆಯಿಂದ ಮುಚ್ಚಬೇಕು ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net