ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೆಲವೊಂದು ಕ್ರಮ ತೆಗೆದುಕೊಳ್ಳಬೇಕು. ಅದರಂತೆ ಸಮಸ್ಯೆ ಇರುವ ಗ್ರಾಮಗಳ ಗುರುತಿಸಲು ಹಿಂದಿನ ವರ್ಷದ ಮಾಹಿತಿ ಪರಿಶೀಲನೆ ಮಾಡಬೇಕು. ಕಳೆದ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿದ ಗ್ರಾಮಗಳ ಪಟ್ಟಿ ಸಿದ್ಧಪಡಿಸಬೇಕು. ಕಡಿಮೆ ಮಳೆ ದಾಖಲಾಗಿರುವ ಹೋಬಳಿ/ಗ್ರಾಮವನ್ನು ಗುರುತಿಸಬೇಕು. ನೀರಿನ ಮೂಲಗಳ ಸ್ಥಿತಿ ಹಾಗೂ ಬೋರ್‌ವೆಲ್‌ಗಳ ನೀರಿನ ಮಟ್ಟ ಪರಿಶೀಲನೆ ಮಾಡಬೇಕು. ತೆರೆದ ಬಾವಿ, ಕೆರೆ ಕುಂಟೆ, ಟ್ಯಾಂಕ್‌ಗಳ ನೀರಿನ ಸಂಗ್ರಹ ಮಟ್ಟ ಪರಿಶೀಲನೆ, ಹಾನಿಗೊಳಗಾದ ಪಂಪ್‌ಸೆಟ್, ಮೋಟಾರ್, ಪೈಪ್‌ಲೈನ್‌ಗಳ ಮಾಹಿತಿ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಮಸಭೆ ಸಮಿತಿ ಸಭೆ ಆಯೋಜಿಸಬೇಕು. ಮಾತ್ರವಲ್ಲದೆ ಸ್ಥಳೀಯರ ಅಭಿಪ್ರಾಯ ಪಡೆದು ಸಮಸ್ಯೆ ಇರುವ ವಾರ್ಡ್/ಜನವಸತಿ ಪ್ರದೇಶ ಗುರುತಿಸಬೇಕು. ವಿಶೇಷವಾಗಿ ಎಸ್‌ಸಿ, ಎಸ್ಟಿ ಕಾಲನಿ, ಹಳ್ಳಿಯ ದೂರದ ಭಾಗಗಳನ್ನು ಪರಿಶೀಲನೆ ಮಾಡುವ ತಕ್ಷಣದ ಕ್ರಮ ಕೈಗೊಳ್ಳಬೇಕು. ಇದಲ್ಲದೆ ಬೋರ್‌ವೆಲ್ ರಿಪೇರಿ ಮತ್ತು ರೀಚಾರ್ಜ್, ಕೆಟ್ಟುಹೋಗಿರುವ ಮೋಟಾರ್/ಪಂಪ್‌ಗಳನ್ನು ಟ್ಯಾಂಕರ್ ಮೂಲಕ ನೀರು ಪೂರೈಕೆ ಅಗತ್ಯವಿದ್ದಲ್ಲಿ ಮಾತ್ರ ಟ್ಯಾಂಕರ್‌ಗಳ ನಿಯೋಜನೆ ಮಾಡಬೇಕು ಎಂದು ಸೂಚನೆ ನೀಡಿದರು.