ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮ

ಮದ್ದೂರು ನಗರದ ಸೋಮನಹಳ್ಳಿಯಿಂದ ರುದ್ರಾಕ್ಷಿಪುರ ಗ್ರಾಮದ ವರೆಗೆ ಬೀದಿದೀಪ ಆಳವಡಿಸುವ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ನೆರವೇರಿಸಿದರು. ಎಂ.ಕೆ.ಹರೀಶ್‌ಬಾಬು, ಸುರೇಶ್ ಕಂಠಿ ಇತರರಿದ್ದರು.
ಮದ್ದೂರು ನಗರದ ಸೋಮನಹಳ್ಳಿಯಿಂದ ರುದ್ರಾಕ್ಷಿಪುರ ಗ್ರಾಮದ ವರೆಗೆ ಬೀದಿದೀಪ ಆಳವಡಿಸುವ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ನೆರವೇರಿಸಿದರು. ಎಂ.ಕೆ.ಹರೀಶ್‌ಬಾಬು, ಸುರೇಶ್ ಕಂಠಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಹೇಳಿಕೆ

ಮದ್ದೂರು:

ತಾಲೂಕಿನ ಸೋಮನಹಳ್ಳಿ, ರುದ್ರಾಕ್ಷಿಪುರ ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿರುವುದರಿಂದ ಮೂಲ ಸೌಲಭ್ಯಗಳೊಟ್ಟಿಗೆ ಶಾಶ್ವತ ಯೋಜನೆಗಳನ್ನು ರೂಪಿಸಲು ಮುಂದಾಗಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ನಗರದ ಸೋಮನಹಳ್ಳಿ ಗ್ರಾಮದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯ ವಿಭಜಕದ ಮೇಲೆ ಸೋಮನಹಳ್ಳಿಯಿಂದ ರುದ್ರಾಕ್ಷಿಪುರದವರೆಗೆ 67 ಲಕ್ಷ ರೂ., ವೆಚ್ಚದ ಅನುದಾನದಲ್ಲಿ ಬೀದಿದೀಪ ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಎರಡು ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಬೀದಿದೀಪ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಇನ್ನಿತರ ಹತ್ತು ಹಲವು ಸವಲತ್ತುಗಳನ್ನು ಒದಗಿಸಲು ಮುಂದಾಗಿದ್ದು, ಕಳೆದ ಹಲವಾರು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಾದರಿ ನಗರವನ್ನಾಗಿಸಲು ಶ್ರಮಿಸುತ್ತಿದ್ದು, ಸ್ಥಳೀಯ ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದರು.
ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಅತೃಪ್ತ ಶಾಸಕರುಗಳನ್ನು ಭೇಟಿ ಮಾಡಿ ಯಾವುದೇ ಮನಾಸ್ತಾಪಗಳಿಲ್ಲದೆ ಬಗೆಹರಿಸಲು ಮುಂದಾಗಿದ್ದು ಕೆಲವು ಶಾಸಕರುಗಳು ಸಚಿವ ಸ್ಥಾನಬೇಕೆಂದು ಪಟ್ಟುಹಿಡಿದಿದ್ದು ಹೈಕಮಾಂಡ್ ತಿರ್ಮಾನ ಕೈಗೊಳ್ಳಲಿದೆ ಎಂದರು.
ಮನ್ ಮುಲ್ ಅಧ್ಯಕ್ಷ ಎಂ.ಕೆ.ಹರೀಶ್‌ಬಾಬು, ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಗ್ರಾ.ಪಂ ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಮುಖಂಡರಾದ ರುದ್ರಾಕ್ಷಿಪುರ ಕಿರಣ್, ರಾಜೇಂದ್ರ, ಅರುವನಹಳ್ಳಿ ಸಿದ್ದರಾಜು, ಮಹದೇವು, ಸಿಪಾಯಿ ಶ್ರೀನಿವಾಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net