ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೆ ಪಿ.ಕೃಷ್ಣ
ಚಿನ್ನನಾಯಕನಹಳ್ಳಿ ಗ್ರಾಮ
ಶ್ರೀರಂಗಪಟ್ಟಣ: ಗ್ರಾಮೀಣ ಪ್ರದೇಶದಲ್ಲಿನ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸ್ಥಿತಿಗೆ ಹೊಂದಾಣಿಕೆಯಾಗಿ ಸಹಕಾರ ನೀಡುವುದು ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ದೇಶ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೆ ಪಿ.ಕೃಷ್ಣ ಹೇಳಿದರು.
ತಾಲೂಕಿನ ಚಿನ್ನನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ಮೈಸೂರಿನ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎನ್ನೆಸ್ಸೆಸ್ಸ್ ಘಟಕ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣ ಮತ್ತು ನಗರ ಪ್ರದೇಶದ ಶಿಬಿರಾರ್ಥಿಗಳು ಗ್ರಾಮೀಣ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳುವ ಜತೆಗೆ ಜೀವನ ಮೌಲ್ಯಗಳನ್ನು ಈ ಜನರಿಂದ ಬೆಳೆಸಿ ಕೊಳ್ಳಬೇಕು. ಗ್ರಾಮೀಣ ಪ್ರದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಿಬಿರದ ಉದ್ದೇಶಗಳನ್ನು ಸಾರ್ಥಕ ಪಡಿಸಬೇಕು ಎಂದು ಕರೆ ನೀಡಿದರು.
ಹಿರಿಯ ಗಾಂಧಿವಾದಿ ವೈದ್ಯ ಡಾ.ಬಿ.ಸುಜಯ್ ಕುಮಾರ್ ಮಾತನಾಡಿ, ಶಿಬಿರಾರ್ಥಿಗಳು ಗ್ರಾಮೀಣ ಜನರ ಆರೋಗ್ಯ, ಸಾರಿಗೆ ನಿಯಮ, ಕಾನೂನು ಅರಿವು, ಸ್ವಚ್ಛತೆ, ಶ್ರಮಾದಾನ, ರಕ್ತದಾನ, ಆರೊಗ್ಯ ತಪಾಸಣೆ ಸೇರಿದಂತೆ ಇತರ ಸಾಮಾಜಿಕ ಕೆಲಸಗಳನ್ನು ನಿರ್ವಹಿಸಲಿ ಎಂದು ಆಶಿಸಿದರು.
ಇಂಜಿನಿಯರ್ ಜೈ ಕುಮಾರ್, ಮುಖಂಡ ನಾಗರಾಜು, ಮರಳಾಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬೋರೇಗೌಡ, ಕಾರ್ಯದರ್ಶಿ ಮಂಜುನಾಥ್, ಕಾಲೇಜು ಪ್ರಾಂಶುಪಾಲ ಡಾ.ಕೆ ಪ್ರಹ್ಲಾದ್‌ರಾವ್, ಎನ್ನೆಸ್ಸೆಸ್ಸ್ ಕಾರ್ಯಕ್ರಮಾಧಿಕಾರಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಾಘವೇಂದ್ರ, ಜೈ ಶ್ರೀರಾಂ ಯುವಕರ ಸಂಘದ ಸರ್ವ ಸದಸ್ಯರು ಇದ್ದರು.