ಹಿಂದೂ ಧರ್ಮ, ದೇಗುಲಗಳ ರಕ್ಷಣೆಯಾಗಲಿ

ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ನಡೆದ ಶ್ರೀ ಚಿಕ್ಕಮ್ಮದೇವಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಡಾ. ನಿಶ್ವಲಾನಂದಸ್ವಾಮಿಜಿ, ಡಾ.ಭಾನುಪ್ರಕಾಶ್ ಶರ್ಮ, ಸಿ.ಪುಟ್ಟರಾಮು, ಟಿ.ಚಂದ್ರ ಶ್ರೀನಿವಾಸ್, ಶಿವರಾಮಯ್ಯ, ವೆಂಕಟಪ್ಪ, ವೆಂಕಟೇಶ್, ತಿಪ್ಪೂರು ಮನು, ಅನಿಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೆಗೌಡ, ಉಮಾ ನಿಂಗರಾಜು, ತಿಪ್ಪೂರು ಕೃಷ್ಣ, ಮಹಾದೇವ, ಜಿ.ಅಪ್ಪಾಜಿ ಉಪಸ್ಥಿತರಿದ್ದರು.
ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ನಡೆದ ಶ್ರೀ ಚಿಕ್ಕಮ್ಮದೇವಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಡಾ. ನಿಶ್ವಲಾನಂದಸ್ವಾಮಿಜಿ, ಡಾ.ಭಾನುಪ್ರಕಾಶ್ ಶರ್ಮ, ಸಿ.ಪುಟ್ಟರಾಮು, ಟಿ.ಚಂದ್ರ ಶ್ರೀನಿವಾಸ್, ಶಿವರಾಮಯ್ಯ, ವೆಂಕಟಪ್ಪ, ವೆಂಕಟೇಶ್, ತಿಪ್ಪೂರು ಮನು, ಅನಿಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೆಗೌಡ, ಉಮಾ ನಿಂಗರಾಜು, ತಿಪ್ಪೂರು ಕೃಷ್ಣ, ಮಹಾದೇವ, ಜಿ.ಅಪ್ಪಾಜಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ನಿಶ್ಚಲಾನಂದ ನಾಥ ಸ್ವಾಮೀಜಿ ಆಶಯ
ಮದ್ದೂರು: ಹಿಂದೂ ಧರ್ಮ ಹಾಗೂ ದೇಗುಲಗಳನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿಶ್ಚಲಾನಂದ ನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ಶುಕ್ರವಾರ ಶ್ರೀ ಚಿಕ್ಕಮ್ಮ ದೇವಿಯ ನೂತನ ದೇವಾಲಯದ ಲೋಕಾರ್ಪಣೆ, ವಿಮಾನ ಗೋಪುರ ಕುಂಭಾಭಿಷೇಕ ಹಾಗೂ ಮರು ಪ್ರತಿಷ್ಠಾಪನಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧಾರ್ಮಿಕ ಪದ್ಧತಿಗಳನ್ನು ಆಚರಿಸುವುದರಿಂದ ಹಾಗೂ ಗುರು ಹಿರಿಯರನ್ನ ಗೌರವಿಸುವುದರಿಂದ ಹಾಗೂ ದೇವರನ್ನ ಪೂಜಿಸುವುದರಿಂದ ಜೀವನದಲ್ಲಿ ನೆಮ್ಮದಿ, ಸುಖ ಹಾಗೂ  ಶಾಂತಿಯನ್ನ ಕಾಣಬಹುದೆಂದು ತಿಳಿಸಿದರು.
ದೇಗುಲಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ದೇಗುಲಗಳ ನಿರ್ಮಾಣದಿಂದ ಗ್ರಾಮದಲ್ಲಿ ಅನ್ಯೂನ್ಯತೆ, ಭಾವೈಕ್ಯತೆ, ಸಹೋದರತ್ವ ಶಾಂತಿ ಮೂಡುತ್ತದೆ ಎಂದರು.
ಜ್ಯೋತಿಷಿ ಡಾ.ಭಾನು ಪ್ರಕಾಶ್ ಶರ್ಮ ಮಾತನಾಡಿ, ಗ್ರಾಮದಲ್ಲಿ ಸುಂದರ ದೇಗುಲ ನಿರ್ಮಾಣ ಮಾಡಿರುವುದು ಅತ್ಯಂತ ಸಂತೋಷದ ವಿಷಯ. ಗ್ರಾಮಸ್ಥರು ಸೇರಿಕೊಂಡು ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನ ಒಂದಾಗಿ ಮಾಡುವ ಮೂಲಕ ಧರ್ಮ ಉಳಿಸುವ ಕಾರ್ಯ ಮಾಡಬೇಕೆಂದರು.
ಕುಣಿಗಲ್ ಅರೆಶಂಕರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಮಯ್ಯ ಸ್ವಾಮೀಜಿ ಮಾತನಾಡಿ, ದೇವರನ್ನ ಕಷ್ಟ ಬಂದಾಗ ಮಾತ್ರ ನೆನೆಯದೆ, ಸದಾಕಾಲ ನೆನೆಯವುದರಿಂದ, ಜೀವನದಲ್ಲಿ ಮುಕ್ತಿ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಿರಂತರವಾಗಿ ದೇವರ ಸೇವೆ ಮಾಡಬೇಕೆಂದು ತಿಳಿಸಿದರು.
ಮಹೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ 7.30 ಕ್ಕೆ ಮಹಾಬಲಿ,  ಪ್ರಾಣಪ್ರತಿಷ್ಠೆ, ಅಭಿಷೇಕ, ಮಹಾಪೂಜೆ, ಗ್ರಾಮಶಾಂತಿ, ಹೋಮ,  ಮಹಾ ಚಂಡಿಕಾಯಾಗ, ನವಗ್ರಹ, ಗಣಪತಿ ಮತ್ತು ಪಂಚಾಮೃತ ಅಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಿಸಲಾಯಿತು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಕೆ.ಎಂ. ಉದಯ್,  ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಸಮಾಜ ಸೇವಕ ಮಂಡ್ಯ ಮಲ್ಲೇಶ್, ಮುಖಂಡ ಮನು, ರಾಣಿ ಐಶ್ವರ್ಯಾ ಬಿಲ್ಡರ್ಸ್ ನ ಎಚ್.ಎಲ್.ಸತೀಶ್, ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಶ್ರೀ ಚಿಕ್ಕಮ್ಮ ತಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಶಿವರಾಮಯ್ಯ,  ಕಾರ್ಯದರ್ಶಿ ಎ. ಬಿ. ವೆಂಕಟಪ್ಪ, ಖಜಾಂಚಿ ಟಿ.ಕೆ.ವೆಂಕಟೇಶ್, ಟಿ.ಸಿ. ಪ್ರಭಾಕರ್, ಟಿ.ಪಿ. ಮನೋಹರ್ ಗೌಡ, ಟಿ.ಪಿ. ದಿಗಂತ್, ಗಿರೀಶ್,  ಎ.ಪಿ.ರಮೇಶ್, ವಿನಯ್, ಕುಮಾರ್, ಟಿ.ಕೆ. ಆನಂದ, ವೆಂಕಟಪ್ಪ, ನಜ ವೆಂಕಟಪ್ಪ, ಟಿ .ಸಿದ್ದಪ್ಪ,  ಹರ್ಷವರ್ಧನ, ಸಿ.ಎಂ. ನವೀನ್,  ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net