ಮದ್ದೂರು ತಾಲೂಕು ಹೆಬ್ಬೆರಳಿನಲ್ಲಿ ನಳಂಬಗಂಗ ಚೋಳರ ಹೋರಾಟ ತಿಳಿಸುವ ಶಾಸನ(9ನೇ ಶತಮಾನ), ಹುಲಗನಹಳ್ಳಿ ಚೋಳರ ತಮಿಳು ವೀರಗಲ್ಲು ಶಾಸನ(10ನೇಶತಮಾನ), ಚಿಕ್ಕರಸಿನಕೆರೆ ಪತ್ತೆಯಾದ ಹುಲಿ ಬೇಟೆ ಶಾಸನದಲ್ಲಿ ಕೆಲವೊಂದು ಅಕ್ಷರ ಮಾತ್ರ ಇವೆ. ಮೆಣಸಿನಗೆರೆಲ್ಲಿ ಗಂಗರ ಕಾಲದ ತುರುಗೋಳ್ ಶಾಸನ, ಮಂಡ್ಯ ತಾಲೂಕು ಯಲಿಯೂರಿನಲ್ಲಿ ವಿಜಯನಗರ ಕಾಲದ 15 ಮತ್ತು 16ನೇ ಶಾಸನವು ವಿಜಯನಗರದ ರಾಜ ಬುಕ್ಕರಾಯನು ಪೃಥ್ವಿರಾಜ್ಯವನ್ನು ಆಳುತ್ತಿದ್ದ ಸಮಯದಲ್ಲಿ ಹದುನಾಡ ಮಹಾಪ್ರಭು ಎಲೆಯೂರ ಚೊಕ್ಕಣ್ಣ, ಮದರಣ್ಣ, ಹೊನ್ನಪ್ಪ, ಬೋದಪಣ್ಣನ ಮಗ ಮಂಚಣ್ಣ ಈ ನಾಲ್ಕು ಜನ ವೀರರು ಚಿಕ್ಕತಮ್ಮ ಎಂಬುವವರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದ್ದು, ಇವರಿಗೆ ನಾಗದೇವನ ಮಗ ಮಾದೇನಾಯ್ಕನು ವೀರಗಲ್ಲು ಹಾಕಿಸಿರುವ ಮಾಹಿತಿ ನೀಡುತ್ತದೆ.