ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಅಲಯನ್ಸ್

ಮಂಡ್ಯದಲ್ಲಿ ಆಯೋಜಿಸಿದ್ದ ಅಲಯನ್ಸ್ ಕ್ಲಬ್‌ನ ಪ್ರಾಂತೀಯ ಸಮ್ಮೇಳನವನ್ನು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ್ ಉದ್ಘಾಟಿಸಿದರು. ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜು ವಿ.ಭೈರಿ, ಅಲಯನ್ಸ್‌ನ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ, ಶಿಕ್ಷಕ ಶಶಿಧರ್ ಈಚಗೆರೆ, ಕೆ.ಎಸ್.ಚಂದ್ರಶೇಖರ್, ಎಸ್.ರಮೇಶ್, ರತ್ಮಮ್ಮ, ಅಪ್ಪಾಜಿ, ನಾಗರಾಜು, ಟಿ.ಎನ್.ರಕ್ಷಿತ್‌ರಾಜ್ ಇತರರಿದ್ದರು.

Published on
ಮಂಡ್ಯ: ಶಿಕ್ಷಣ ಹಾಗೂ ಆರೋಗ್ಯ ತಪಾಸಣೆಗೆ ಹೆಚ್ಚು ಒತ್ತು ನೀಡುವ ಮೂಲಕ ಅಲಯನ್ಸ್ ಕ್ಲಬ್‌ಗಳು ಸಾಮಾಜಿಕ ಕಳಕಳಿ ಮೆರೆಯುತ್ತಿವೆ ಎಂದು ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಶ್ಲಾಘಿಸಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ವತಿಯಿಂದ ಆಯೋಜಿಸಿದ್ದ ಸೇವಾನುಬಂಧ, ಸೇವಾ ಮನಸ್ಸುಗಳ ಸಮ್ಮಿಲನ, ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಲಯನ್ಸ್ ಕ್ಲಬ್ ಸಾಮಾಜಿಕ ಧ್ಯೇಯೋದ್ದೇಶ ಹೊಂದಿದೆ. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕ್ರಮ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಯೋಗಾನಂದ್, ಶ್ರಮ ಹಾಗೂ ಶ್ರದ್ಧೆಯ ದುಡಿಮೆಯಿಂದ ಮಾತ್ರ ಯಶಸ್ಸು ಸಾಧ್ಯ. ಜೀವನದಲ್ಲಿ ಯಾವುದೇ ವೃತ್ತಿ ಮತ್ತು ಪ್ರವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಬದ್ಧತೆಯಿಂದ ದುಡಿಯಬೇಕೇ ವಿನಾ ಫಲಿತಾಂಶದ ಬಗ್ಗೆ ಲೆಕ್ಕಾಚಾರ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಜೀವನದಲ್ಲಿ ತೃಪ್ತಿಗಾಗಿ ದುಡಿಯುವುದು ಎಷ್ಟು ಮುಖ್ಯವೋ ಜೀವನೋಪಾಯಕ್ಕಾಗಿ ದುಡಿಮೆ ಅಷ್ಟೇ ಮುಖ್ಯ. ಬದುಕಿನ ಸವಾಲಿನ ದಿನಗಳನ್ನು ನೋಡಿಕೊಂಡಾಗ ನಾನು ಜೀವನದಲ್ಲಿ ಸೋತಾಗ ಆತ್ಮವಿಶ್ವಾಸವನ್ನು ಕಳೆದುಕೊಂಡಿಲ್ಲ. ಗೆಲುವು ಪಡೆದಾಗ ಕ್ರಿಯಾಶೀಲತೆಯನ್ನು ಕಳೆದುಕೊಳ್ಳದೆ ನಿರಂತರವಾಗಿ ಗುರಿಯ ಕಡೆಗೆ ಸಾಗಿದ್ದರಿಂದಲೇ ಈ ಸ್ಥಿತಿ ತಲುಪಿದ್ದೇನೆ ಎಂದು ವಿವರಿಸಿದರು.
ಕ್ಲಬ್‌ನ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜು ವಿ.ಭೈರಿ ಮಾತನಾಡಿ, ಸಾಧನೆ ಮಾಡುವವರನ್ನು ಗುರುತಿಸುವ ಕೆಲಸವನ್ನು ನಮ್ಮ ಸಂಸ್ಥೆಗಳು ಮಾಡಿಕೊಂಡು ಬರುತ್ತಿವೆ. ಇದು ಸಾಧಕರನ್ನು ಮತ್ತಷ್ಟು ಉತ್ತೇಜನ ನೀಡುವಂತೆ ಮಾಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲಯನ್ಸ್‌ನ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ, ಶಿಕ್ಷಕ ಶಶಿಧರ್ ಈಚಗೆರೆ, ಕೆ.ಎಸ್.ಚಂದ್ರಶೇಖರ್, ಎಸ್.ರಮೇಶ್, ರತ್ಮಮ್ಮ, ಅಪ್ಪಾಜಿ, ನಾಗರಾಜು, ಟಿ.ಎನ್.ರಕ್ಷಿತ್‌ರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net