ಏಡ್ಸ್ ಕುರಿತು ಜಾಗೃತಿ ಅವಶ್ಯಕ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ಏಡ್ಸ್ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ ನಡೆಯಿತು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ಏಡ್ಸ್ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ ನಡೆಯಿತು.
Published on
ಮಂಡ್ಯ: ಪ್ರಸ್ತುತ ದಿನದಲ್ಲಿ ಹೆಚ್ಚು ಸಾವು ಸಂಭವಿಸುತ್ತಿರುವುದರಲ್ಲಿ ಏಡ್ಸ್ ರೋಗ ಕಾರಣ ಎನ್ನುವುದನ್ನು ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.
ನಗರದ ಮಿಮ್ಸ್ ಆವರಣದಲ್ಲಿರುವ ಮಮತೆಯ ಮಡಿಲು ನಿತ್ಯ ಅನ್ನದಾಸೋಹದ ಆವರಣದಲ್ಲಿ ಕೃಷಿಕ ಅಲಯನ್ಸ್ ಕ್ಲಬ್, ಪರಿಸರ ಅಲಯನ್ಸ್ ಕ್ಲಬ್, ಮಾಂಡವ್ಯ ಅಲಯನ್ಸ್ ಕ್ಲಬ್ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಏಡ್ಸ್ ಮಾರಕ ರೋಗವಾಗಿದೆ. ಇದು ಅಪರಿಚಿತ ಲೈಂಗಿಕ ಕ್ರಿಯೆಯಿಂದ, ಅಸುರಕ್ಷಿತ ಸೀರೆಂಜ್‌ಗಳಿಂದಲೂ ಬರುತ್ತದೆ. ಜತೆಗೆ ಟ್ಯಾಟೂ ಹಾಕಿಸಿಕೊಳ್ಳುವಾಗ ಆ ಸೂಜಿಯನ್ನು ಏಡ್ಸ್ ರೋಗವಿರುವ ವ್ಯಕ್ತಿಗೆ ಬಳಸಿ ಮತ್ತೆ ಆರೋಗ್ಯವಂತ ವ್ಯಕ್ತಿಗೆ ಬಳಸಿದಾಗ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಲೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಈ ರೋಗದ ಬಗ್ಗೆ ನೀವು ಜಾಗೃತರಾಗುವುದಲ್ಲದೆ ಇತರರಿಗೂ ಮಾಹಿತಿ ನೀಡುವುದು ಮುಖ್ಯವಾಗಬೇಕು ಎಂದು ತಿಳಿಸಿದರು.
ಅಲಯನ್ಸ್‌ನ ಎರಡನೇ ಪ್ರಾಂತಪಾಲ ಚಂದ್ರಶೇಖರ್, ಮುಖಂಡರಾದ ಧನಂಜಯ ದರಸಗುಪ್ಪೆ, ಶಿವಕುಮಾರ್, ಅರುಣಾನಂದ, ಮಂಗಲ ಯೋಗೇಶ್, ಪ್ರತಿಭಾಂಜಲಿ ಡೇವಿಡ್, ಶಶಿಧರ್ ಈಚಗೆರೆ ಇತರರಿದ್ದರು.
ಕಲಾವಿದರಾದ ವೈರಮುಡಿ, ಸಂತೆಕಸಲಗೆರೆ ಬಸವರಾಜು, ಶೋಭಾ ಪಿ.ಗೌಡ, ಹನಿಯಂಬಾಡಿ ಶೇಖರ್, ನಾಗರಾಜು, ವಿನುತಾ, ಪೂಜಾ ಅವರು ಏಡ್ಸ್ ಜಾಗೃತಿ ಕುರಿತ ಬೀದಿ ನಾಟಕ ಪ್ರದರ್ಶನ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net