ದಲಿತ ಹಕ್ಕುಗಳ ಸಮಿತಿ ಉಪಾಧ್ಯಕ್ಷರ ನಿಧನಕ್ಕೆ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನರಾದ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಪರಶುರಾಮ್ ಅವರಿಗೆ ಸಮಿತಿಯ ವತಿಯಿಂದ ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನುಡಿನಮನ ಕಾರ್ಯಕ್ರಮವು ನಡೆಯಿತು. ಕೃಷ್ಣೇಗೌಡ, ಕೃಷ್ಣ, ವಿಜೇಂದ್ರಕುಮಾರ್, ಅಂಬೂಜಿ, ಗಿರಿಜಮ್ಮ ಇತರರು ಇದ್ದರು.

Published on
ಮದ್ದೂರು: ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಉಪಾಧ್ಯಕ್ಷ ಪರಶುರಾಮ್ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಕೃಷ್ಣೆಗೌಡ ಮಾತನಾಡಿ, ಪರಶುರಾಮ್ ಅವರು ನಮ್ಮೆಲ್ಲರ ಉತ್ತಮ ಒಡನಾಡಿಯಾಗಿದ್ದರು. ದಲಿತರ ಮೇಲೆ ಶೋಷಣೆಗಳು ನಡೆದಾಗ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಅವರ ಅಗಲಿಕೆ ನಮ್ಮೆಲ್ಲರಲ್ಲಿ ಅತೀವ ದುಃಖ ತಂದಿದೆ ಎಂದರು.
ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣ ಮಾತನಾಡಿ, ಪರಶುರಾಮ್ ಅವರು ಸಮಿತಿಯು ಹಮ್ಮಿಕೊಳ್ಳುವ ಯಾವುದೇ ದಲಿತರಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಮುಂದಿರುತ್ತಿದ್ದರು. ನಮ್ಮೆಲ್ಲರಿಗೆ ಸ್ಫೂರ್ತಿಯಾಗಿದ್ದರು. ಅವರ ಅಗಲಿಕೆ ನಮಗೆ ನೋವು ತಂದಿದ್ದು ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಂಬೂಜಿ, ಖಜಾಂಚಿ ವಿಜೇಂದ್ರಕುಮಾರ್, ಪದಾಧಿಕಾರಿಗಳಾದ ಶಿವಲಿಂಗಯ್ಯ, ಗಿರಿಜಮ್ಮ, ಪ್ರದೀಪ್, ಹನುಮೇಶ್, ತೊರೆಶೆಟ್ಟಿಹಳ್ಳಿ ಮಹೇಶ್, ಜಯರಾಮಯ್ಯ, ವೆಂಕಟೇಶ್, ವರಲಕ್ಷ್ಮೀ ಸೇರಿದಂತೆ ಹಲವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net