ಐತಿಹಾಸಿಕ ದನಗಳ ಜಾತ್ರೆಗೆ ಚಾಲನೆ

ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಶಿವರಾತ್ರಿ ಹಬ್ಬದ ಪ್ರಯುಕ್ತ ಐತಿಹಾಸಿಕ ದನಗಳ ಜಾತ್ರೆಗೆ ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿಯ ಸಂಚಾಲಕ  ಆಶಯ್ ಜಿ. ಮಧು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಶಿವರಾತ್ರಿ ಹಬ್ಬದ ಪ್ರಯುಕ್ತ ಐತಿಹಾಸಿಕ ದನಗಳ ಜಾತ್ರೆಗೆ ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿಯ ಸಂಚಾಲಕ ಆಶಯ್ ಜಿ. ಮಧು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.
Published on
ಕೆ.ಎಂ.ದೊಡ್ಡಿ: ಸಮೀಪದ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಶಿವರಾತ್ರಿ ಹಬ್ಬದ ಪ್ರಯುಕ್ತ ಐತಿಹಾಸಿಕ ದನಗಳ ಜಾತ್ರೆಗೆ ಚಾಲನೆ ನೀಡಲಾಯಿತು.
ಈ ವೇಳೆ ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿಯ ಸಂಚಾಲಕ ಆಶಯ್ ಜಿ.ಮಧು ದನಗಳ ಜಾತ್ರೆಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಧುನಿಕ ಬೇಸಾಯಕ್ಕೆ ಮಾರು ಹೋಗಿ ತಲಾ ತಲಾಂತಗಳಿಂದ ನಡೆಯುತಿದ್ದ ಬೇಸಾಯಗಳನ್ನು ಮರೆತ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಸಾಕುವುದು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಸುಗಳು ನಮ್ಮ ಆರ್ಥಿಕತೆಯ ಬೆನ್ನೆಲುಬು. ದೇಸಿತಳಿ ರಾಸುಗಳ ರಕ್ಷಣೆ ಕೇವಲ ಉಳುಮೆ ಮಾಡಲು ಅಲ್ಲ. ಬದಲಾಗಿ ಅದೊಂದು ಸೇವೆ ಹಾಗೂ ಅದನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದ್ದು ದೇಸಿರಾಸುಗಳ ಹಲವು ತಳಿಗಳು ನಶಿಸುವ ಹಂತ ತಲುಪಿದ್ದು, ಈಗಲಾದರೂ ಎಚ್ಚೆತ್ತು ದೇಸಿ ತಳಿ ರಾಸುಗಳ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು ಎಂದು ನುಡಿದರು.
ಈಗಾಗಲೇ ವಿವಿಧ ಜಿಲ್ಲೆಗಳಿಂದ ರೈತರು ರಾಸುಗಳನ್ನು ಕೊಳ್ಳಲು ಹಾಗೂ ಮಾರಾಟ ಮಾಡಲು ಮುಂದಾಗಿದ್ದು, ಸುತ್ತಲಿನ ನೂರಾರು ಹಳ್ಳಿಗಳು ಮತ್ತು ಅಕ್ಕಪಕ್ಕದ ಜಿಲ್ಲೆಯವರು ರಾಸುಗಳನ್ನು ತಂದು ಇಲ್ಲಿ ವಾಸ್ತವ್ಯ ಹೂಡಿ ರಾಸುಗಳನ್ನು ವ್ಯಪಾರ ವಹಿವಾಟು ಆರಂಭಿಸಿದ್ದಾರೆ ಎಂದರು.
ಕೆಲವರು ಹಸುಗಳನ್ನು ಕೊಳ್ಳಲೆಂದೇ ದೂರದ ಜಿಲ್ಲೆಗಳಿಂದ ಬರುತಿದ್ದು, ಪ್ರದರ್ಶನಕ್ಕೆ ದಿಬ್ಬಗಳ ನಿರ್ಮಾಣ ಮತ್ತು ಶೆಡ್‌ಗಳ ಕೆಲಸವನ್ನು ರೈತರು ಪ್ರಾರಂಭಿಸಿದ್ದು, ಈಗಾಗಲೇ ಫೆ.10 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಫೆ. 17 ರವರೆಗೆ ದನಗಳ ಜಾತ್ರೆ ನಡೆಯಲಿದೆ ಎಂದರು.
ಜಾತ್ರೆಗೆ ಆಗಮಿಸುವ ಜನ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿ, ಮೂಲ ಸೌಕರ್ಯ ಒದಗಿಸಲಾಗಿದ್ದು ಜಾತ್ರಾ ಮಹೋತ್ಸವ ವೈಭವದಿಂದ ನಡೆಯುತ್ತಿದ್ದು, ರೈತರಲ್ಲಿ ಮಂದಾಹಾಸ ಮೂಡಿಸಿದೆ ಎಂದರು.
ರಾಜ್ಯದ ವಿವಿಧ ಮೂಲೆಗಳಿಂದ ಜಾತ್ರೆಗೆ ದನಗಳು ಆಗಮಿಸುತ್ತಿದು, ಆಯ್ಕೆಯಾದ ಉತ್ತಮ ಎತ್ತುಗಳಿಗೆ ಪ್ರತಿ ವಿಭಾಗಕ್ಕೂ ಪ್ರಥಮ 15,000 ರೂ., ದಿತ್ವೀಯ 9000 ರೂ., ತೃತೀಯ 6000 ಸಾವಿರ ರೂ., ಬಹುಮಾನ ನೀಡಲಾಗುತ್ತಿದೆ. ಹಸುಗಳ ಪ್ರತಿ ವಿಭಾಗದಲ್ಲಿ ಪ್ರಥಮ 10,000 ರೂ., ದಿತ್ವೀಯ 7,500 ರೂ., ತೃತೀಯ 5000ರೂ. ನೀಡಲಾಗುತ್ತಿದೆ. ಫೆ.18ರಂದು ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಕಾರ್ಯದರ್ಶಿ ಕಾರ್ಯದರ್ಶಿ ಸಿದ್ದೇಗೌಡ, ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನಾಗರಾಜು, ಅಣ್ಣೂರು ಸಿದ್ದಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net