12 ಆಳ್ವಾರುಗಳಿಗೆ ಮಾಲೆಮರ್ಯಾಧೆ ಮಾಡಿ ಅರೆಯರ್ ಪಾಟ್ಟು, ಸಂಗೀತರಾಮಾಯಣ ನಂತರ ಮಂಗಳವಾದ್ಯದ ಪ್ರದಕ್ಷಿಣೆಯೊಂದಿಗೆ ಮಹೋತ್ಸವ ಪ್ರತಿದಿನದಂತೆ ನೆರವೇರಿತು. ನಾಲ್ಕನೇ ಉತ್ಸವದಂದು ವಿದ್ವಾನ್ ಆಯಿನರಸಿಂಹನ್ ತಮಿಳುನಾಡಿನಿಂದ ಗಿಳಿಮಾಲೆ ತರಿಸಿ ಚೆಲುವನಾರಾಯಣನಿಗೆ ಅರ್ಪಿಸಿದರೆ, ನೇಮಿಸೇವೆಯಿರುವ ಪ್ರತಿಕೈಂಕರ್ಯಪರರು ವಿಭಿನ್ನವಾದ ಪುಷ್ಪಹಾರಗಳಿಂದ ಕೈಂಕರ್ಯ ನೆರವೇರಿಸಿದ್ದು, ಭಕ್ತರನ್ನು ಪುಳಕಿತಗೊಳಿಸಿತು.