ಛಾವಣಿಯ ಕಬ್ಬಿಣದ ಸರಳು ಕಿತ್ತು ಬಂದು ಅಲ್ಲಿನ ಗಾರೆ ಚುರುಕಿ ಉದುರುತ್ತಿದೆ. ಚುರುಕಿಯಲ್ಲಿನ ಕಬ್ಬಿಣದ ಸರಳು ತುಕ್ಕು ಹಿಡಿದು ಹೊರಚಾಚಿವೆ. ಕೂರುವ ಆಸನಗಳು ಕಿತ್ತುಬಂದಿದ್ದು ಕೂರುವುದರಿಲಿ, ನೋಡಲು ಆಗದಷ್ಟು ಹಾಳಾಗಿವೆ. ಗಾಳಿ, ಮಳೆ ಬಂದರೆ ನಿಲ್ದಾಣದಲ್ಲಿ ನಿಲ್ಲಲು ಕೂಡ ಆಗದಂತಹ ಸ್ಥಿತಿ ಇದೆ. ನಿರ್ವಹಣೆ ಕಾಣದ ನಿಲ್ದಾಣದ ತುಂಬಾ ಕಸಕಡ್ಡಿ, ಬೀಡಿ, ಸಿಗರೇಟು, ಪ್ಲಾಸ್ಟಿಕ್ ಕವರ್‌ನಂತಹ ಹಲವು ಅನುಪಯುಕ್ತ ವಸ್ತುಗಳು ಸಂಗ್ರಹವಾಗಿವೆ. ದುರ್ವಾಸನೆ ಸಹಿಸಿಕೊಂಡು ಬಸ್‌ಗಳನ್ನು ಕಾಯುವ ಅನಿವಾರ್ಯತೆ ಪ್ರಯಾಣಿಕರಿಗೆ ಎದುರಾಗಿದೆ.