ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ಸನ್ನಿಧಿಯ ಪಾವಿತ್ರತೆ ಮತ್ತು ಪರಂಪರೆಯನ್ನು ಕಾಪಾಡಲು ವ್ಯವಸ್ಥಾಪನಾ ಸಮಿತಿ ಬದ್ಧವಾಗಿದ್ದು, ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಮಾಡುವುದಿಲ್ಲ. ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿಯಲ್ಲಿನ ಹಣ, ಚಿನ್ನ, ಬೆಳ್ಳಿ ಕಳ್ಳತನವಾಗುತ್ತಿರುವ ಶಂಕೆಯ ಇಒ ದೂರಿನ ಸಂಬಂಧ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಾನೂನಿನ ಪ್ರಕಾರ ಕ್ರಮವಹಿಸುತ್ತೇವೆ ಎಂದು ಮಾಹಿತಿ ನೀಡಿದರು.