ಗ್ರಾಮೀಣ ಕ್ರೀಡೆಗಳನ್ನು ಬೆಂಬಲಿಸಿ

ಮಳವಳ್ಳಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ  ಚಾಲನೆ ನೀಡಿದರು. ರವಿ, ಲಿಂಗರಾಜು, ದೇವರಾಜು, ಪುರಸಭೆ ಪುಟ್ಟಸ್ವಾಮಿ,  ದೊಡ್ಡಯ್ಯ, ಆಟೋ ಮಂಜಣ್ಣ, ಅಣ್ಣಪ್ಪ, ರವಿ, ವೆಂಕಟೇಶ್, ಕೃಷ್ಣ, ನಂಜುಂಡಯ್ಯ, ಆನಂದ್, ಬಸವರಾಜು, ಚೇತನ್, ಮಲ್ಲೇಶ್ ಇದ್ದರು.
ಮಳವಳ್ಳಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು. ರವಿ, ಲಿಂಗರಾಜು, ದೇವರಾಜು, ಪುರಸಭೆ ಪುಟ್ಟಸ್ವಾಮಿ, ದೊಡ್ಡಯ್ಯ, ಆಟೋ ಮಂಜಣ್ಣ, ಅಣ್ಣಪ್ಪ, ರವಿ, ವೆಂಕಟೇಶ್, ಕೃಷ್ಣ, ನಂಜುಂಡಯ್ಯ, ಆನಂದ್, ಬಸವರಾಜು, ಚೇತನ್, ಮಲ್ಲೇಶ್ ಇದ್ದರು.
Published on
ಮಳವಳ್ಳಿ : ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು. ಪಟ್ಟಣದ ಸಂತೆಮೈದಾನ ಆವರಣದಲ್ಲಿ ಪಟ್ಟಲದಮ್ಮ ಸಿಡಿ ಹಬ್ಬದ ಅಂಗವಾಗಿ ರಾಮರೂಢಸ್ವಾಮಿ ಮಠದ ಹತ್ತು ಜನಗಳ ಗರಡಿ ವತಿಯಿಂದ ಸೋಮವಾರ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡದರು. ಜಾತ್ರೆ, ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ನಾಡ ಸಂಸ್ಕೃತಿಯನ್ನು ಬಿಂಬಿಸುವ ನಾಡ ಕುಸ್ತಿ ಪಂದ್ಯಾವಳಿಗಳು ಹೆಚ್ಚಾಗಿ ನಡೆಯಬೇಕು. ಸ್ಪರ್ಧಾಳುಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಭವಿಷ್ಯದಲ್ಲಿ ಸಾಧಕರಾಗಬೇಕೆಂದು ಸಲಹೆ ನೀಡಿದರು. ನಾಡಕುಸ್ತಿ ನಮ್ಮದ ದೇಸೀ ಸಂಸ್ಕೃತಿ ಬಿಂಬಿಸುವ ಪಂದ್ಯಾವಳಿ. ಇದಕ್ಕೆ ಗ್ರಾಮೀಣ ಜನರೇ ಪೋಷಕರಾಗಬೇಕು ಎಂದರು.
ಪ್ರತಿದಿನ ಕುಸ್ತಿ ಅಭ್ಯಾಸ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.
ಯುವಜನರು ಇದನ್ನು ಮೈಗೂಡಿಸಿಕೊಳ್ಳಬೇಕು. ರಾಮರೂಢಸ್ವಾಮಿ ಮಠದ ಹತ್ತು ಜನಗಳ ಗರಡಿ ವತಿಯಿಂದ ಸಿಡಿ ಹಬ್ಬದ ಪ್ರಯುಕ್ತ ಪ್ರತಿವರ್ಷ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಇತ್ತೀಚೆಗೆ ನಿಧನರಾದ ಮೈಸೂರಿನ ಹಿರಿಯ ಕುಸ್ತಿ ಪಟು ಟೈಗರ್ ಬಾಲಾಜಿಗೆ ಸಂತಾಪ ಸೂಚಿಸಲಾಯಿತು.
ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಪೈಲ್ವಾನರು ಸೆಣಸಿದರು.
ಕುಸ್ತಿ ಪಂದ್ಯಾವಳಿ ವ್ಯವಸ್ಥಾಪಕ ರವಿ, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಕೆ.ಜೆ ದೇವರಾಜು, ಪುರಸಭೆ ಮಾಜಿ ಅಧ್ಯಕ್ಷರಾದ ಪುಟ್ಟಸ್ವಾಮಿ, ದೊಡ್ಡಯ್ಯ, ಆಟೋ ಮಂಜಣ್ಣ, ಅಣ್ಣಪ್ಪ, ರವಿ, ವೆಂಕಟೇಶ್, ಕೃಷ್ಣ, ನಂಜುಂಡಯ್ಯ, ಆನಂದ್, ಬಸವರಾಜು, ಚೇತನ್, ಮಲ್ಲೇಶ್, ನೂರುಲ್ಲಾ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net