ಐಕ್ಯತೆಯನ್ನು ರಕ್ಷಿಸಲು ಬದ್ಧವಾಗಿರಬೇಕು

ಮಳವಳ್ಳಿ ಪಟ್ಟಣದ ಅನಂತರಾಮ್ ವೃತ್ತದಲ್ಲಿ ಶುಕ್ರವಾರ ಸಿಐಟಿಯು ಸಂಘಟನೆ ವತಿಯಿಂದ ಶುಕ್ರವಾರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡ ರಾಮಕೃಷ್ಣ ಮಾತನಾಡಿರು. ದೇವಿ, ತಿಮ್ಮೇಗೌಡ , ಮಹದೇವಮ್ಮ,  ಭರತ್ ರಾಜ್,  ಸುಶೀಲಾ, ಆನಂದ್, ಶಿವಮಲ್ಲಯ್ಯ, ಮಾದಪ್ಪ, ಮಂಟೇಸ್ವಾಮಿ,  ಚಂದ್ರಶೇಖರ,  ಪ್ರಕಾಶ್, ಸುಧಾ, ಗೌರಮ್ಮ  ಇದ್ದರು.
ಮಳವಳ್ಳಿ ಪಟ್ಟಣದ ಅನಂತರಾಮ್ ವೃತ್ತದಲ್ಲಿ ಶುಕ್ರವಾರ ಸಿಐಟಿಯು ಸಂಘಟನೆ ವತಿಯಿಂದ ಶುಕ್ರವಾರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡ ರಾಮಕೃಷ್ಣ ಮಾತನಾಡಿರು. ದೇವಿ, ತಿಮ್ಮೇಗೌಡ , ಮಹದೇವಮ್ಮ, ಭರತ್ ರಾಜ್, ಸುಶೀಲಾ, ಆನಂದ್, ಶಿವಮಲ್ಲಯ್ಯ, ಮಾದಪ್ಪ, ಮಂಟೇಸ್ವಾಮಿ, ಚಂದ್ರಶೇಖರ, ಪ್ರಕಾಶ್, ಸುಧಾ, ಗೌರಮ್ಮ ಇದ್ದರು.
Published on
ಮಳವಳ್ಳಿ : ಕಾರ್ಮಿಕ ವರ್ಗದ ಮತ್ತು ಜನತೆಯ ಐಕ್ಯತೆಯನ್ನು ರಕ್ಷಿಸಲು ಬದ್ಧವಾಗಿ ಇರುವುದೇ ನಿಜವಾದ ಸಂಘಟನೆ ಎಂದು ಮುಖಂಡ ರಾಮಕೃಷ್ಣ ತಿಳಿಸಿದರು.
ಪಟ್ಟಣದ ಅನಂತರಾಮ್ ವೃತ್ತದ ಬಳಿ ಸಿಐಟಿಯು ಸಂಘಟನೆ ವತಿಯಿಂದ ಶುಕ್ರವಾರ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮೇ 1 ರಂದು ವಿಶ್ವದಾದ್ಯಂತ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ಮೇ ದಿನಕ್ಕೆ ಮಹತ್ತರವಾದ ಚಾರಿತ್ರಿಕ ಮಹತ್ವ ಇದೆ. ಆದ ಕಾರಣ ಅದೊಂದು ಅಂತಾರಾಷ್ಟ್ರೀಯ ಮಹತ್ವದ ದಿನವಾಗಿದೆ. ಅಂದು ಪ್ರಪಂಚದಾದ್ಯಂತ ಕಾರ್ಮಿಕ ವರ್ಗವು ಐಕ್ಯತೆಯ ಉತ್ಸವವನ್ನಾಗಿ ಆಚರಿಸಲಾಗುತ್ತದೆ ಎಂದರು.
ಕಾರ್ಮಿಕರು 8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿರಾಮಕ್ಕಾಗಿ ನಡೆದ ಸುದೀರ್ಘವಾದ ಹೋರಾಟದ ಅಂತಿಮ ಜಯವೇ ಮೇ ದಿನ. ಜಗತ್ತಿನ ಶ್ರಮ ಜೀವಿಗಳ ಅಂತಾರಾಷ್ಟ್ರೀಯ ಗುಡುಗು ಮೊಳಗಿದ್ದು ಈ ಘೋಷಣೆಯೊಂದಿಗೆ ಎಂದು ಸ್ಮರಿಸಿದರು.
ಪ್ಯಾರಿಸ್‌ನಲ್ಲಿ 1889ರಲ್ಲಿ ಕೊಟ್ಟ ಕರೆಯೊಂದಿಗೆ 1890ರಲ್ಲಿ ಮೇ ದಿನದ ಆಚರಣೆ ಆರಂಭವಾಯಿತು. ಅದರ ತಕ್ಷಣದ ಗುರಿ ಚಿಕಾಗೋದ ಮೇ ದಿನ. ಅಮೆರಿಕದ ಟ್ರೇಡ್ ಯೂನಿಯನ್ ಆಂದೋಲನದ ಚರಿತ್ರೆಯಲ್ಲಿ ಹೇ ಮಾರ್ಕೆಟ್ ಪ್ರಕರಣ ಒಂದು ಆಕಸ್ಮಿಕ ಘಟನೆಯಾಗಿರಲಿಲ್ಲ. ಅದಕ್ಕಿಂತ ಹಿಂದೆ ಅಮೆರಿಕದಲ್ಲಿ ಭಾರೀ ಸಮರಶೀಲ ಟ್ರೇಡ್ ಯೂನಿಯನ್ ಆಂದೋಲನಗಳು ನಡೆದಿದ್ದವು.
ಕಾರ್ಮಿಕರ, ಅದರಲ್ಲಿಯೂ ವಿಶೇಷವಾಗಿ ಚಿಕಾಗೋ ನಗರದ ಕಾರ್ಮಿಕರು ಅನೇಕ ಧೀರ ಹೋರಾಟಗಳನ್ನು ಮಾಡಿದ್ದರು.
ಹತ್ತಾರು ಸಂಘರ್ಷಗಳನ್ನು ಸಂಘಟಿಸಿ ಕಾರ್ಮಿಕ ವರ್ಗದ ಅನನ್ಯ ಐಕ್ಯತೆಗೆ ನಾಂದಿ ಹಾಡಿದ್ದರು. ಎಂಟು ಗಂಟೆಗಳ ಕೆಲಸದ ದಿನಕ್ಕಾಗಿ ಅಲ್ಲಲ್ಲಿ ಆಂದೋಲನಗಳು ನಡೆದಿದ್ದರೂ ಈ ಬೇಡಿಕೆಯೊಂದಿಗೆ ನಡೆಸಿದ ಕಾರ್ಮಿಕ ವರ್ಗದ ಹೋರಾಟಗಳ ಮುಂಚೂಣಿಯಲ್ಲಿದ್ದವರು ಚಿಕಾಗೋ ಕಾರ್ಮಿಕರೇ ಎಂದವರು ವಿವರಿಸಿದರು.
ಅಖಿಲ ಭಾರತ ಜನವಾದಿ ಮಹಿಳ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಮಾತನಾಡಿ, ಆ. 20, 1886ರಂದು 7 ಜನರಿಗೆ ಮರಣ ದಂಡನೆ, ಒಬ್ಬರಿಗೆ 15ವರ್ಷಗಳ ಕಾರಾಗೃಹ ವಾಸ ವಿಧಿಸಲಾಯಿತು ಎಂದು ಸ್ಮರಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ತಿಮ್ಮೇಗೌಡ ಹೆಚ್ ಕೆ ಜಿಲ್ಲಾ ಖಜಾಂಚಿ ಮಹದೇವಮ್ಮ, ಭರತ್ ರಾಜ್ ಮಹಿಳಾ ಸಂಘಟನೆಯ ಸುಶೀಲಾ ಕೂಲಿಕಾರಸಂಘದ ಆನಂದ್.ಶಿವಮಲ್ಲಯ್ಯ.ಅಖಿ ನ ಮಾದಪ್ಪ.ಮಂಟೇಸ್ವಾಮಿ. ಚಂದ್ರಶೇಖರ. ಪ್ರಕಾಶ್.ಸುಧಾ.ಗೌರಮ್ಮ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net