ಶ್ರೀ ರಾಘವೇಂದ್ರ ಮಠದಲ್ಲಿ ಮಹಾರಥೋತ್ಸವ

 ಕೃಷ್ಣರಾಜ ಸಾಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ರಾಯರ 355 ನೇ ಉತ್ತಾರಾರಾಧನೆ ಪ್ರಯುಕ್ತ ಮಹಾರಥೋತ್ಸವ ಜರುಗಿತು.
ಕೃಷ್ಣರಾಜ ಸಾಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ರಾಯರ 355 ನೇ ಉತ್ತಾರಾರಾಧನೆ ಪ್ರಯುಕ್ತ ಮಹಾರಥೋತ್ಸವ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಾಘವೇಂದ್ರ ಮಠ
  • 355 ನೇ ಉತ್ತಾರಾರಾಧನೆ
ಕೆ.ಆರ್.ಸಾಗರ: ಕೃಷ್ಣರಾಜ ಸಾಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ರಾಯರ 355 ನೇ ಉತ್ತಾರಾರಾಧನೆ ಪ್ರಯುಕ್ತ ಪಲ್ಲಕಿ ಉತ್ಸವ ಹಾಗೂ ಮಹಾರಥೋತ್ಸವ ಜರುಗಿತು.
ಮುಖ್ಯ ಅರ್ಚಕ ಶ್ರೀ ರಾಘವೇಂದ್ರಾಚಾರ್ ನೇತೃತ್ವದಲ್ಲಿ ಬೆಳಗ್ಗೆ ಸುಭ್ರಪಾತ ಸೇವೆಯೊಂದಿಗೆ ರಾಯರ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಸಿಂಗರಿಸಿ ಅಲಕೃಂತ ರಥದಲ್ಲಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕೃಷ್ಣರಾಜಸಾಗರ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಸ್ತೆ ಇಕ್ಕೆಳಗಳಲ್ಲಿ ನಿಂತಿದ್ದ ಭಕ್ತರು ರಾಯರಿಗೆ ಜಯಘೋಷ ಕೂಗಿದರು. ಹಲವರು ಪೂಜೆ ಸಲ್ಲಿಸಿದರು. ರಥ ಮಠದ ಮುಂಭಾಗಕ್ಕೆ ಬಂದು ನಿಂತಾಗ ಮಂಗಳಾರತಿ ಮಾಡಲಾಯಿತು.
ರಾಯರ ಕೀರ್ತನೆ, ಭಜನೆ ಸಮೇತ ಮಹಾಮಂಗಳಾರತಿ ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಅರ್ಚಕರಾದ ಸುರೇಂದ್ರಾಚಾರ್, ವಿಜಯೇಂದ್ರಾಚಾರ್ ಸೇರದಿಂತೆ ನೂರಾರು ಭಕ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net