ಬಸವ ಧರ್ಮ ಕೇಂದ್ರದಿಂದ ಮಹಾಮನೆ ಸಂಸ್ಕೃತಿ

 ಬಸವ ಧರ್ಮ ಕೇಂದ್ರದ ವತಿಯಿಂದ ಎಸ್.ಲೀಲಾವತಿ ಮತ್ತು ಪಿ.ಸುಂದ್ರಪ್ಪ ದಂಪತಿಯನ್ನು ಅಭಿನಂದಿಸಲಾಯಿತು. ಶಿವಮಲ್ಲಪ್ಪ, ಸುರೇಶ್, ಪರಶಿವಮೂರ್ತಿ ಇತರರು ಇದ್ದರು.
ಬಸವ ಧರ್ಮ ಕೇಂದ್ರದ ವತಿಯಿಂದ ಎಸ್.ಲೀಲಾವತಿ ಮತ್ತು ಪಿ.ಸುಂದ್ರಪ್ಪ ದಂಪತಿಯನ್ನು ಅಭಿನಂದಿಸಲಾಯಿತು. ಶಿವಮಲ್ಲಪ್ಪ, ಸುರೇಶ್, ಪರಶಿವಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Mahamane Culture
ಹಲಗೂರು: ಬಸವಣ್ಣನವರ ವಿಚಾರಧಾರೆಗಳನ್ನು ನಾಡಿನ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಬಸವ ಧರ್ಮ ಕೇಂದ್ರ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ ಎಂದು ಬೆಂಗಳೂರು ಬಸವಧರ್ಮ ಕೇಂದ್ರದ ಅಧ್ಯಕ್ಷ ಶಿವಮಲ್ಲಪ್ಪ ತಿಳಿಸಿದರು.
ಹಲಗೂರು ಸಮೀಪದ ಲಿಂಗಪಟ್ಟಣ ಗ್ರಾಮದಲ್ಲಿ ಶುಕ್ರವಾರ ನಿವೃತ್ತ ಶಿಕ್ಷಕ ಸುಂದ್ರಪ್ಪ ಅವರ ಮನೆಯಲ್ಲಿ ಬೆಂಗಳೂರು ಬಸವ ಧರ್ಮ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘114ನೇ ಮಹಾಮನೆ ಸಂಸ್ಕೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯೆ ದೊಡ್ಡದಲ್ಲ, ಅನುಭವ ದೊಡ್ಡದು ಎಂಬ ವಿಷಯ ಮಂಡನೆ ಮಾಡಿದ ನಿವೃತ್ತ ಸೈನಿಕ ಸುರೇಶ್, ವಿದ್ಯೆ ನಮಗೆ ಸಿದ್ಧಾಂತ ಕಲಿಸಿದರೆ, ಅನುಭವ ಆ ಸಿದ್ದಾಂತವನ್ನು ಕಾರ್ಯರೂಪಕ್ಕೆ ತರುವ ಕೌಶಲ ಬೆಳೆಸಲಿದೆ ಎಂದರು.
ನಿವೃತ್ತ ಶಿಕ್ಷಕ ಸುಂದ್ರಪ್ಪ ಮಾತನಾಡಿದರು. ಎಸ್.ಲೀಲಾವತಿ ಮತ್ತು ಪಿ.ಸುಂದ್ರಪ್ಪ ದಂಪತಿಯನ್ನು ಬಸವ ಧರ್ಮ ಕೇಂದ್ರದ ವತಿಯಿಂದ ಸ್ಮರಣಾ ಫಲಕ ನೀಡಿ ಅಭಿನಂದಿಸಲಾಯಿತು. ಶರಣರಾದ ಪರಶಿವಮೂರ್ತಿ ಬಸವಣ್ಣನವರ ವಚನಗಳನ್ನು ಹಾಡಿದರು.
ಬಸವಧರ್ಮ ಕೇಂದ್ರದ ಅಧ್ಯಕ್ಷರಾದ ಶಿವಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ಪರಶಿವಮೂರ್ತಿ, ನಾಗರಾಜು ಬೋರೇಗೌಡ, ಸುಂದ್ರಪ್ಪ, ಕೆ.ಸಿ.ಮಹೇಶ, ಶಿಕ್ಷಕ ಜಿ.ಎಸ್. ಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net