ಮಡಿವಾಳ ಮಾಚಿದೇವರು ಸಮಾಜದ ಒಳಿತಿಗಾಗಿ ಐತಿಹಾಸಿಕ ಕೊಡುಗೆಗಳನ್ನು ನೀಡಿರುವ ಅವರು, ಬಸವಣ್ಣನವರೊಂದಿಗೆ ಸೇರಿ ಜಾತಿ, ಮೇಲು-ಕೀಳು ತಾರತಮ್ಯಗಳ ವಿರುದ್ಧ ಹೋರಾಡಿ, ವಚನ ಸಾಹಿತ್ಯವನ್ನು ರಕ್ಷಿಸುವುದರ ಜತೆಗೆ ಅನುಭವ ಮಂಟಪದಲ್ಲಿ ’ಮಡಿ’ ಹಾಸಿ ಕಾಯಕ ನಿರ್ವಹಿಸುವ ಮೂಲಕ 12ನೇ ಶತಮಾನದ ಶಿವಶರಣರಲ್ಲಿ ಪ್ರಮುಖರಾಗಿದ್ದರು. ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಪರುವತಯ್ಯ ಮತ್ತು ಸುಜ್ನಾನವ್ವರ ಪುತ್ರರಾಗಿ ಜನಿಸಿದ ಮಾಚಯ್ಯ, ಕಲ್ಯಾಣವನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಂಡಿದ್ದರು. ಜನನ ಮತ್ತು ಬಾಲ್ಯ ಮಡಿವಾಳ ಕುಟುಂಬದಲ್ಲಿ ಜನಿಸಿದ್ದರಿಂದ ಬಾಲ್ಯದಿಂದಲೇ ಶರಣರ ಬಟ್ಟೆಗಳನ್ನು ತೊಳೆಯುವ ಕಾಯಕಕ್ಕೆ ನಿಷ್ಠೆಯಾಗಿದ್ದರು. ಈ ಕಾಯಕವೇ ಅವರ ಭಕ್ತಿ ಮತ್ತು ಜೀವನದ ಉಸಿರಾಗಿತ್ತು. ಕಲಿದೇವರ ಹಸ್ತಪತ್ರಗಳಲ್ಲಿ 345 ವಚನಗಳು ದೊರೆತಿವೆ. ಕಲಚೂರ್ಯ ರಾಯ ಮುರಾರಿಯೊಂದಿಗಿನ ಯುದ್ಧಗಳಲ್ಲಿ ಶರಣರನ್ನು ಧೈರ್ಯ ತುಂಬಿ ರಕ್ಷಿಸಿದ ಸಾಹಸಿಯಾಗಿದ್ದರು ಎಂದು ಸ್ಮರಿಸಿದರು.