ಉತ್ತಮ ಸಮಾಜ ನಿರ್ಮಾಣ ಮಾಡೋಣ: ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಕರೆ

ಮಂಡ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಡಿವಾಳ ಮಾಚಿದೇವ ಜಯಂತ್ಯುತ್ಸವ
  • ನಗರದ ಮಾಚಿದೇವ ರಸ್ತೆಯಲ್ಲಿ ಆಯೋಜನೆ
  • ಮೈಷುಗರ್ ಅಧ್ಯಕ್ಷ ಸೇರಿದಂತೆ ಹಲವರು ಭಾಗಿ
ಮಂಡ್ಯ: ಮಡಿವಾಳ ಮಾಚಿದೇವರ ತತ್ವ, ನಿಷ್ಠೆ, ಆದರ್ಶಗಳನ್ನು ಅನುಸರಿಸುವುದರ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಬೇಕು ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ತಿಳಿಸಿದರು.
ವೀರ ಮಡಿವಾಳ ಮಾಚಿದೇವರ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನಗರದ ಮಾಚಿದೇವ ರಸ್ತೆ ನಾಮಫಲಕದ ಬಳಿ ಆಯೋಜಿಸಿದ್ದ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಅನುಭವ ಮಂಟಪದಲ್ಲಿ ಬಸವಣನವರ ಕಾಯಕನಿಷ್ಠೆಯನ್ನು ಪ್ರತಿಪಾದಿಸುತ್ತಾ, ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದವರಲ್ಲಿ ಮಾಚಿದೇವರು ಪ್ರಮುಖರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನಗಳನ್ನು ರಕ್ಷಣೆ ಮಾಡಿ, ತಮ್ಮ ವೀರ ಪರಾಕ್ರಮವನ್ನು ಪ್ರದರ್ಶಿಸಿದರು ಎಂದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ವಚನ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ. ಮಡಿವಾಳ ಮಾಚಿದೇವರು ನೇರ ಮತ್ತು ನಿಷ್ಠೂರವಾದದ ವಚನಗಳಿಂದ ಜನರನ್ನು ಜಾಗೃತಗೊಳಿಸುವ ಮತ್ತು ಸಮಾಜವನ್ನು ತಿದ್ದುವ ಕಾಯಕವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಮಾತನಾಡಿ, ಮನುಜಕುಲಂ ತಾನೊಂದೆ ವಲಂ ಎಂಬ ಆದಿಕವಿ ಪಂಪನ ಆಶಯದಂತೆ ಮನುಷ್ಯ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಎಲ್ಲ ಕಾಲಮಾನದಲ್ಲೂ ಮನುಷ್ಯತ್ವವನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲರನ್ನೂ ಒಗ್ಗೂಡಿಸಿ ಅನುಭವ ಮಂಟಪವನ್ನು ನಿರ್ಮಿಸಿದ್ದರು. ಅಂತಹ ವಾತಾವರಣ ಇಂದಿಗೂ ಪ್ರಸ್ತುವಾಗಿದೆ ಎಂದರು.
ವೀರ ಮಡಿವಾಳ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷ ಬಿ.ಟಿ.ಗುರುರಾಜ್, ಡಿ.ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ವಿವಿಧ ಸಂಘಟನೆ ಮುಖಂಡರಾದ ಎಂ.ಕೃಷ್ಣ, ಮಂಜು, ಎನ್.ದೊಡ್ಡಯ್ಯ, ಹನುಮಂತಯ್ಯ, ಸುಧನ್ವ, ಗೋವಿಂದಯ್ಯ, ಎಂ.ಎನ್.ರವಿ, ಪ್ರದೀಪ್, ಜಯಲಕ್ಷ್ಮಮ್ಮ, ವೀಣಾ ಶಂಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net