ಮದ್ದೂರು ತಾಲೂಕು ರೈತ ಸಂಘದ ವತಿಯಿಂದ ಕೆಸ್ತೂರು ಗ್ರಾಮದಲ್ಲಿ ಮದ್ದೂರು ಕುಣಿಗಲ್ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಯಿತು. ಲಿಂಗಪ್ಪಾಜಿ, ಜಿ.ಎ.ಶಂಕರ್, ವಿನೋದ್‌ಬಾಬು, ಶಂಕರಪ್ಪ, ಅಶೋಕ್, ವೆಂಕಟೇಗೌಡ ಇದ್ದರು.
ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ವಿರೋಧಿಸಿ ಮದ್ದೂರು ತಾಲೂಕು ರೈತ ಸಂಘದ ವತಿಯಿಂದ ಕೆಸ್ತೂರು ಗ್ರಾಮದಲ್ಲಿ ಮದ್ದೂರು ಕುಣಿಗಲ್ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಯಿತು.
ರೈತ ಸಂಘದ ರಾಜ್ಯ ವಿಭಾಗೀಯ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಬರ ಎದುರಾಗಿದ್ದು ಬೆಳೆಗಳು ಒಣಗಿ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ಮಾಡಿರುವ ಕ್ರಮ ಖಂಡನಾರ್ಹ ಎಂದರು.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲು ಮುಂದಾಗಬಾರದು. ಒಂದು ವೇಳೆ ನೀರು ಹರಿಸಿದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರೈತ ಸಂಘದ ಮುಖಂಡರಾದ ಜಿ.ಎ.ಶಂಕರ್, ಉಮೇಶ್, ಶಂಕರಪ್ಪ, ಲಿಂಗಪ್ಪಾಜಿ, ವಿನೋದ್ ಬಾಬು, ರವಿಕುಮಾರ್, ಸಿದ್ದರಾಜು, ಮರಿಸ್ವಾಮಿ, ಅಶೋಕ್, ವೆಂಕಟೇಗೌಡ, ಸತೀಶ್, ಶಿವರಾಜು, ವೆಂಕಟೇಶ್, ಸಂಜಯ್, ಸುಬ್ಬಣ್ಣ, ಮೋಹನ್, ಬಾಂಡ್ ರವಿ, ಅಶೋಕ್, ಶ್ರೀನಿವಾಸ್, ವಿಷಕಂಠ, ಭವಿತ, ಮಲ್ಲೇಶ್, ಸಂತೋಷ್, ಮಗಣ್ಣ, ರಾಮಲಿಂಗಯ್ಯ, ನಿಂಗೇಗೌಡ, ಸ್ವಾಮಿ, ಸಂದೇಶ, ಶೌರ್ಯ, ಚೇತನ್, ರಾಜೇಶ್, ರಾಜಣ್ಣ, ಜಯರಾಮಣ್ಣ, ಬಸವರಾಜು, ಸುರೇಶ್, ಶಿವ,ಕುಮಾರ್, ನಾಗೇಂದ್ರ ಇದ್ದರು.