ಮರಳಿಗ ಗ್ರಾಮದ ಮರಳಿಗಪ್ಪನ ದೇವಸ್ಥಾನದ ಬಸವ 6 ತಿಂಗಳಿನಿಂದ ಗೊಲ್ಲರದೊಡ್ಡಿಯಲ್ಲಿ ವಾಸವಿದ್ದು, ಗ್ರಾಮಸ್ಥರಿಗೆ ಅಚ್ಚುಮೆಚ್ಚಾಗಿತ್ತು. ಗ್ರಾಮಸ್ಥರು ತುಂಬಾ ಪ್ರೀತಿಯಿಂದ ಬಸವನನ್ನು ನೋಡಿಕೊಳ್ಳುತ್ತಿದ್ದರು ಮತ್ತು ಪೂಜಿಸುತ್ತಿದ್ದರು.
ಮೃತ ಬಸವನನ್ನು ಗೊಲ್ಲರದೊಡ್ಡಿಯಿಂದ ಮರಳಿಗ ಗ್ರಾಮದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮರಳಿಗ ಗ್ರಾಮದ ಮರಳಗಪ್ಪ ದೇಗುಲದ ಆವರಣದಲ್ಲಿ ಅರ್ಚಕರಾದ ಗಿರೀಶ್ ಹಾಗೂ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಯಿತು.
ಗೊಲ್ಲರದೊಡ್ಡಿ ಗ್ರಾಮದಲ್ಲಿ ಬಸವನ 11 ದಿನದ ಪುಣ್ಯ ಸ್ಮರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದ್ದಾರೆ.