ಲಾರಿ ಚಾಲಕನಿಗೆ ಕಾರಗೃಹ ಶಿಕ್ಷೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಶ್ರೀರಂಗಪಟ್ಟಣ: ಪಾದಾಚಾರಿಗೆ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಶ್ರೀರಂಗಪಟ್ಟಣ ನ್ಯಾಯಾಲಯ 6 ಸಾವಿರ ರೂ. ದಂಡ, 1 ವರ್ಷ 6 ತಿಂಗಳ ಕಾರಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಕಲ್ಯಾಣಪುರದ ಚೆನ್ನರೇವಣ್ಣ ಶಿಕ್ಷೆಗೊಳಗಾಗಿ ಚಾಲಕ. 2023ರ ಆ.24ರಂದು ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದ ಸೀತಾಪುರ ವೃತ್ತದಲ್ಲಿ ಲಾರಿ ಚಲಾಯಿಸುತ್ತಿದ್ದಾಗ ಅದೇ ಗ್ರಾಮದ ವಾಸುದೇವ ಅವರಿಗೆ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದರು. ಅಪಘಾತ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು. ಕ್ಯಾತನಹಳ್ಳಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸಿ.ಎಂ.ಲಿಂಗರಾಜು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ನಿರ್ಲಕ್ಷೃ ಚಾಲನೆ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಆರ್.ಮಹೇಶ್ ಅವರು, ಅಪರಾಧಿಗೆ 6 ಸಾವಿರ ರೂ. ದಂಡ 1.6 ವರ್ಷ ಕಾರಗೃಹ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಸಹಾಯಕ ಅಭಿಯೋಜಕಿ ಜಿ.ಪಿ. ಸುಧಾಮಣಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net