ವೆಂಕಟೇಶ್ವರ ಸ್ವಾಮಿಗೆ ಹರಿಸೇವೆ ಇಂದಿನಿಂದ

ಕೆ.ಎಂ.ದೊಡ್ಡಿಯ ಶ್ರೀ ವೆಂಕಟೇಶ್ವರ ಸ್ವಾಮಿ.
ಕೆ.ಎಂ.ದೊಡ್ಡಿಯ ಶ್ರೀ ವೆಂಕಟೇಶ್ವರ ಸ್ವಾಮಿ.
Published on
ಕೆ.ಎಂ.ದೊಡ್ಡಿ : ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ 4ನೇ ವಾರ್ಷಿಕೋತ್ಸವ ಮತ್ತು ಹರಿಸೇವೆ ಕಾರ್ಯಕ್ರಮ ಏ.18 ರಂದು ಜರುಗಲಿದ್ದು, ಸಕಲ ಸಿದ್ಧತೆಗಳು ಆರಂಭಗೊಂಡಿವೆ.
ಗ್ರಾಮದ ಶ್ರೀ ವೆಂಕಟೇಶ್ವರಸ್ವಾಮಿ ಹಾಗೂ ಹೊಸಕೆರೆ ಶ್ರೀ ಮಾಸ್ತಮ್ಮ ದೇವರ ಒಕ್ಕಲಿಗರು ಈ ದೇವಾಲಯ ನಿರ್ಮಿಸಿ 4 ವರ್ಷವಾಗಿದೆ. ಅದರ ಅಂಗವಾಗಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಏ.17 ರಂದು ಮೇಲುಕೋಟೆಯ ಸ್ಥಾನಾಚಾರ್ಯ ಡಾ.ಶೆಲ್ವೆ ಪಿಳ್ಳೆ ಅಯ್ಯಂಗಾರ್ ನೇತೃತ್ವದಲ್ಲಿ ಜನರ ಒಳಿತಿಗಾಗಿ ಮಹಾಸುದರ್ಶನ ಹೋಮ ಜರುಗಲಿದ್ದು, ಪುರೋಹಿತರಾದ ಯು.ವಿ.ಗಿರೀಶ್, ಅರ್ಚಕರಾದ ನರಸಿಂಹ ಭಟ್, ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಲಿದ್ದಾರೆ.
ಹರಿಸೇವೆ ಅಂಗವಾಗಿ ಭಾರತೀನಗರದ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವು ಹರಿಸೇವೆ ಕಾರ್ಯಕ್ರಮ ಜರುಗಲಿದ್ದು ಏ.17 ರಂದು ವೆಂಕಟೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜೆ, ಸಂಜೆ ಹೋಮ-ಹವನಗಳ ಕಾರ್ಯಕ್ರಮ ನಡೆಯಲಿದೆ.
ಏ.18 ರಂದು ಬೆಳಗ್ಗೆ 10 ಗಂಟೆಗೆ ಜನಪದ ಕಲಾತಂಡಗಳೊಂದಿಗೆ ಹಾಗೂ ಹೂ-ಹೊಂಬಾಳೆ ಮೂಲಕ ರಥದಲ್ಲಿ ವೆಂಕಟೇಶ್ವರಸ್ವಾಮಿ ಮೆರವಣಿಗೆ ಮತ್ತು ಮುತ್ತತ್ತಿಯ ಕರಿಯಣ್ಣ - ಕೆಂಚಣ್ಣ ಸ್ವಾಮಿಗಳ ಪರಿಷೆ ಉತ್ಸವ ಮತ್ತು ಮಣೆಸೇವೆ ನಡೆಯಲಿದೆ. ಶಿವಾರ ಉಮೇಶ್ ತಂಡದವರಿಂದ ಭಕ್ತಿ ಗೀತಗಾಯನ ಏರ್ಪಡಿಸಲಾಗಿದ್ದು, ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net