ಸಾಹಿತ್ಯ ಹೋರಾಟದ ಪ್ರಬಲ ಅಸ್ತ್ರ

ಮಳವಳ್ಳಿ ಪಟ್ಟಣದ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಆಯೋಜಿಸಿದ್ದ ಅಕ್ಷರದವ್ವ ಕವಿಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಟಿ.ಎಂ.ಪ್ರಕಾಶ್, ಟಿ.ಸತೀಶ್ ಜವರೇಗೌಡ, ಎಚ್.ಆರ್.ಕನ್ನಿಕಾ, ಹುರುಗಲವಾಡಿ ರಾಮಯ್ಯ ಇದ್ದರು.
ಮಳವಳ್ಳಿ ಪಟ್ಟಣದ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಆಯೋಜಿಸಿದ್ದ ಅಕ್ಷರದವ್ವ ಕವಿಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಟಿ.ಎಂ.ಪ್ರಕಾಶ್, ಟಿ.ಸತೀಶ್ ಜವರೇಗೌಡ, ಎಚ್.ಆರ್.ಕನ್ನಿಕಾ, ಹುರುಗಲವಾಡಿ ರಾಮಯ್ಯ ಇದ್ದರು.
Published on
ಮಳವಳ್ಳಿ: ಸಮಾಜದಲ್ಲಿ ತಳಸಮುದಾಯದ ಜನರ ಮೇಲೆ ಆಗುತ್ತಿರುವ ದೌರ್ಜನ್ಯ, ಶೋಷಣೆ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶಕ್ತಿ ಕೊಡುವ ಸಾಹಿತ್ಯವು ಹೋರಾಟದ ಒಂದು ಪ್ರಬಲ ಅಸ್ತ್ರ ಎಂದು ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಯೂನಿವರ್ಸಲ್ ಸೇವಾ ಟ್ರಸ್ಟ್ ಕಚೇರಿಯಲ್ಲಿ ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ‘ಅಕ್ಷರದವ್ವ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ’ ಸಮಾರಂಭದಲ್ಲಿ ಮಾತನಾಡಿದರು. ಯಾವುದೇ ಕಾವ್ಯದಲ್ಲಿ ಪ್ರತಿಭಟನೆಯ ದನಿಯಿರಬೇಕು. ಆಗ ಹೋರಾಟದ ಕಾವು ಇಮ್ಮಡಿಯಾಗುತ್ತದೆ. ಕಾವ್ಯವು ಆಂದೋಲನ, ಚಳವಳಿಗಳಿಗೆ ಶಕ್ತಿ ತುಂಬಿದಾಗ ಮಾತ್ರ ಜನರ ಎದೆಯಲ್ಲಿ ಹೋರಾಟದ ಬೀಜ ಚಿಗುರಿ ಹೆಮ್ಮರವಾಗಲು ಸಾಧ್ಯ ಎಂದರು.
ಸಮಾಜದ ಎಲ್ಲ ಕಾಲಘಟ್ಟದಲ್ಲೂ ಶೋಷಣೆ ಇತ್ತು. ಅದು ಈಗಲೂ ದೌರ್ಜನ್ಯದ ನಾನಾ ಮುಖಗಳನ್ನು ತೋರುತ್ತಲೇ ಇದೆ. ಇಂತಹ ಶೋಷಣೆ ವಿರುದ್ಧ ಶಿಕ್ಷಣ ಜಾಗೃತಿ ಮೂಡಿಸಿದರೆ ಸಾಹಿತ್ಯ ಪ್ರತಿಭಟಿಸುವ ಶಕ್ತಿಯನ್ನು ಧಾರಣೆ ಮಾಡುತ್ತದೆ ಎಂದು ಹೇಳಿದರು.
ಹುಣಸೂರಿನ ಪೂರ್ಣಚಂದ್ರ ಅವರ ‘ಒಳಗಣ್ಣು ತರೆದು ನೋಡು’ ಕವನ ಸಂಕಲನವನ್ನು ಸಮಾಜ ಸೇವಕ ಎಂ.ವಿನಯ್ ಕುಮಾರ್ ಬಿಡುಗಡೆ ಮಾಡಿದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಕವಯಿತ್ರಿ ಪಿ.ನಾಗರತ್ನಮ್ಮ ವಹಿಸಿದ್ದರು.
ಕವಯಿತ್ರಿ ಎಚ್.ಆರ್.ಕನ್ನಿಕಾ, ಯೂನಿವರ್ಸಲ್ ಸೇವಾಟ್ರಸ್ಟ್ ಅಧ್ಯಕ್ಷ ಟಿ.ಎಂ.ಪ್ರಕಾಶ್, ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುಂಚಣ್ಣ, ದಸಾಪ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ, ಕವಯಿತ್ರಿ ಶಿಲ್ಪಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net