ಯುವ ಸಮೂಹ ದುಶ್ಚಟಗಳಿಂದ ದೂರವಿರಲಿ

ಶ್ರೀರಂಗಪಟ್ಟಣದ ತಾಲೂಕಿನ ಚಿಕ್ಕಅಂಕನಹಳ್ಳಿಯ ಉತ್ತೂರಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಶಿಬಿರವನ್ನು ಎಂ.ಆರ್.ಸತ್ಯನಾರಾಯಣ ಉದ್ಘಾಟಿಸಿದರು. ಆರ್. ದಿನೇಶ್, ಡಾ.ಎಂ.ದೇವಿಕಾ, ಮಲ್ಲಿಕಾರ್ಜುನ್,  ಮಹೇಂದ್ರ,  ಎಂ.ಎ.ಸೌಮ್ಯಾ ಇದ್ದರು.
ಶ್ರೀರಂಗಪಟ್ಟಣದ ತಾಲೂಕಿನ ಚಿಕ್ಕಅಂಕನಹಳ್ಳಿಯ ಉತ್ತೂರಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಶಿಬಿರವನ್ನು ಎಂ.ಆರ್.ಸತ್ಯನಾರಾಯಣ ಉದ್ಘಾಟಿಸಿದರು. ಆರ್. ದಿನೇಶ್, ಡಾ.ಎಂ.ದೇವಿಕಾ, ಮಲ್ಲಿಕಾರ್ಜುನ್, ಮಹೇಂದ್ರ, ಎಂ.ಎ.ಸೌಮ್ಯಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾರದ ವಿಲಾಸ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ದಿನೇಶ್
  • ಚಿಕ್ಕಅಂಕನಹಳ್ಳಿ ಗ್ರಾಮದ ಉತ್ತೂರಮ್ಮ ದೇವಾಲಯ ಆವರಣ
ಶ್ರೀರಂಗಪಟ್ಟಣ: ಎನ್ನೆಸ್ಸೆಸ್ ಶಿಬಿರಗಳು ವಿದ್ಯಾರ್ಥಿ ಜೀವನಕ್ಕೆ ಸುಂದರ ಅನುಭವ ನೀಡುವುದರ ಜತೆಗೆ ವಿದ್ಯಾವಂತ ಯುವಸಮೂಹ ಸಮಾಜಕ್ಕೆ ಕರ್ತವ್ಯಗಳನ್ನು ತಿಳಿಸಿಕೊಡುವ ಮೂಲಕ ಜವಾಬ್ದಾರಿ ವ್ಯಕ್ತಿಯನ್ನಾಗಿಸಲಿದೆ ಎಂದು ಶಾರದ ವಿಲಾಸ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ದಿನೇಶ್ ಹೇಳಿದರು.
ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದ ಉತ್ತೂರಮ್ಮ ದೇವಾಲಯ ಆವರಣದಲ್ಲಿ ಮೈಸೂರಿನ ಶಾರದಾ ವಿಲಾಸ ಕಾಲೇಜು ವತಿಯಿಂದ ಭಾರತಕ್ಕಾಗಿ ಯುವಜನತೆ ಎಂಬ ಧ್ಯೇಯ ಘೋಷದೊಂದಿಗೆ ಬುಧವಾರ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಮಾತನಾಡಿದರು.
ಪ್ರಸ್ತುತ ಯುವಸಮೂಹ ಒಂದಲ್ಲ ಒಂದು ರೀತಿಯ ದುಶ್ಚಟ, ವ್ಯಸನಗಳಿಗೆ ತುತ್ತಾಗುತ್ತಿರುವುದು ನೋವಿನ ಸಂಗತಿ. ಇಂತಹ ಸೆಳೆತಕ್ಕೆ ಇಲ್ಲಿನ ಯಾರೊಬ್ಬರೂ ಸಿಲುಕಬಾರದು. ಅಲ್ಲದೆ ಸಿಲುಕಿರುವವರನ್ನು ಹೊರತರಲು ಸಹಕರಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ದೇವಿಕಾ ಮಾತನಾಡಿ, ಶಿಬಿರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸಮಾಜದಲ್ಲಿ ಪ್ರಜ್ಞಾವಂತಿಕೆ ಜತೆಗೆ ಜವಾಬ್ದಾರಿಯ ವ್ಯಕ್ತಿಗಳಾಗಲಿದ್ದಾರೆ. ರಾಷ್ಟ್ರಪ್ರೇಮದೊಂದಿಗೆ ಸೇವಾ ಮನೋಭಾವನೆ ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆಯಾಗಲಿದ್ದಾರೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ಇಂತಹ ಶಿಬಿರಗಳು ಹೆಚ್ಚು ನಡೆಯಬೇಕಿದೆ. ಇದು ಗಾಂಧೀಜಿ ಅವರ ಕನಸಾಗಿದ್ದು, ಅದನ್ನು ನನಸು ಮಾಡಬೇಕಿದೆ ಎಂದರು.
ಕಾರ್ಯಕ್ರಮವನ್ನು ವಿಜಯವಾಣಿ ಪತ್ರಿಕೆ ಮೈಸೂರು ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ್ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳು ಗಣ್ಯರ ಸಮ್ಮುಖದಲ್ಲಿ ಬದ್ಧತೆ ಮತ್ತು ಕರ್ತವ್ಯಗಳನ್ನು ಕೈಗೊಳ್ಳುವ ಕುರಿತು ಪ್ರತಿಜ್ಞೆ ಕೈಗೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಮಲ್ಲಿಕಾರ್ಜುನ್, ಕನ್ನಡ ವಿಭಾಗದ ಪ್ರಾಧ್ಯಾಪಕ ಮಹೇಂದ್ರ, ಸಹಾಯಕ ಅಧಿಕಾರಿ ಎಂ.ಎ.ಸೌಮ್ಯಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net