ಯುವ ಸಮೂಹ ಜಾನಪದ ಸಂಸ್ಕೃತಿ, ಪರಂಪರೆ ಉಳಿಸಲಿ

ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ  ಚರ್ಮ ವಾದ್ಯ ತರಬೇತಿ ಶಿಬಿರವನ್ನು ವಿ.ಸಿ.ಉಮಾಶಂಕರ್ ಉದ್ಘಾಟಿಸಿದರು. ಡಿ.ಪಿ.ಸ್ವಾಮಿ, ಎಸ್.ಆರ್.ಚಂದ್ರಶೇಖರ್, ಕೀಲಾರ ಕೃಷ್ಣೇಗೌಡ, ನಗಾರಿ ಮಂಜು, ಚಾಮನಹಳ್ಳಿ ಮಂಜು ಇದ್ದರು.
ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಚರ್ಮ ವಾದ್ಯ ತರಬೇತಿ ಶಿಬಿರವನ್ನು ವಿ.ಸಿ.ಉಮಾಶಂಕರ್ ಉದ್ಘಾಟಿಸಿದರು. ಡಿ.ಪಿ.ಸ್ವಾಮಿ, ಎಸ್.ಆರ್.ಚಂದ್ರಶೇಖರ್, ಕೀಲಾರ ಕೃಷ್ಣೇಗೌಡ, ನಗಾರಿ ಮಂಜು, ಚಾಮನಹಳ್ಳಿ ಮಂಜು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್
  • ಚಾಮನಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನ
ಮದ್ದೂರು: ಯುವ ಜಾನಂಗ ಜಾನಪದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಅಖಿಲ ಕರ್ನಾಟಕ ಡಾ. ಬಾಬು ಜಗಜೀವನರಾಂ ಸಂಘಗಳ ಒಕ್ಕೂಟ ವತಿಯಿಂದ ತಾಲೂಕಿನ ಚಾಮನಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಚರ್ಮ ವಾದ್ಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ತಮಟೆ ವಾದ್ಯ ಸಂಸ್ಕೃತಿಯ ಪ್ರತೀಕ. ತಮಟೆ ಬಾರಿಸುವ ಸದ್ದಿಗೆ ಎಂತಹವರ ಮೈ ರೋಮಾಂಚನಗೊಳ್ಳುತ್ತದೆ. ಕೋಲಾಟ, ನಂದಿ ಕುಣಿತ, ಪಟ್ಟದ ಕುಣಿತ, ವೀರಗಾಸೆ, ಡೊಳ್ಳು ಕುಣಿತ ಜಾನಪದ ಸೊಗಡನ್ನು ಶ್ರೀಮಂತ ಗೊಳಿಸುವಲ್ಲಿ ತಮಟೆ ವಾದ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ತಬಲ, ಮಂಗಳವಾದ್ಯ, ಡೋಲು ವಾದ್ಯಗಳು ತನ್ನದೇ ಆದ ಇತಿಹಾಸ ಹಾಗೂ ವೈಶಿಷ್ಟೃ ಹೊಂದಿದೆ. ಇಂತಹ ಕಾರ್ಯಾಗಾರ ಪ್ರತಿ ಗ್ರಾಮದಲ್ಲೂ ಹಮ್ಮಿಕೊಂಡಾಗ ಮತ್ತಷ್ಟು ತಮಟೆ ಬಾರಿಸುವ ಕಲೆ ಪಸರಿಸಲು ಅವಕಾಶವಾಗುತ್ತದೆ ಎಂದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿ, ಇತ್ತೀಚಿಗೆ ಫೈಬರ್‌ಗಳಲ್ಲಿ ತಯಾರಿಸಿದ ಆಧುನಿಕ ತಮಟೆಗಳು ಚಾಲ್ತಿಗೆ ಬಂದಿರುವುದು ಚರ್ಮ ವಾದ್ಯಗಳ ತಯಾರಿಕೆಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ. ಕಚ್ಚಾವಸ್ತುಗಳ ಬೆಲೆ ದುಬಾರಿಯಾಗಿ ತಯಾರಿಕೆಗೆ ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ ಎಂದು ತಿಳಿಸಿದರು.
ಧಾರ್ಮಿಕ ಪೂಜೆ, ಹಬ್ಬ, ಸಮಾರಂಭ ಮೆರವಣಿಗೆ ಸಂತೋಷ ಮತ್ತು ದುಃಖ ಕಾರ್ಯಕ್ರಮಗಳಲ್ಲಿ ತಮಟೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಚರ್ಮದಿಂದ ತಮಟೆ ವಾದ್ಯಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಉನ್ನತೀಕರಿಸಬೇಕೆಂದು ಕರೆಕೊಟ್ಟರು.
ಮಾದರ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಎಸ್.ಆರ್.ಚಂದ್ರಶೇಖರ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೃಷ್ಣೇಗೌಡ, ತರಬೇತಿ ಶಿಕ್ಷಕರಾದ ನಗಾರಿ ಮಂಜು, ಚೇತನ್‌ಶೆಟ್ಟಿ, ಆಯೋಜಕರಾದ ಚಾಮನಹಳ್ಳಿ ಮಂಜು, ಮುಖಂಡ ಶಾಂತ ಕುಚೇಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net