ಮುಂದಿನ ಪೀಳಿಗೆಗೆ ವಿಶ್ವಕರ್ಮರ ಇತಿಹಾಸ ತಿಳಿಸಲಿ

ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಿಸಲಾಯಿತು. ವಿ.ಸಿ.ಉಮಾಶಂಕರ್, ಮಂಜು, ಸಿದ್ದರಾಜು, ಮಹಾದೇವರಾಜು, ವೆಂಕಟೇಶಾಚಾರಿ,ಮೂರ್ತಾಚಾರಿ ಇದ್ದರು.
ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಿಸಲಾಯಿತು. ವಿ.ಸಿ.ಉಮಾಶಂಕರ್, ಮಂಜು, ಸಿದ್ದರಾಜು, ಮಹಾದೇವರಾಜು, ವೆಂಕಟೇಶಾಚಾರಿ,ಮೂರ್ತಾಚಾರಿ ಇದ್ದರು.
Published on
ಮದ್ದೂರು: ಪುರಾಣಗಳ ಪ್ರಕಾರ ವಿಶ್ವಕರ್ಮರು ಅಪ್ರತಿಮ ವಾಸ್ತುಶಿಲ್ಪಿಗಳಾಗಿದ್ದು, ದೇವತೆಗಳ ಅರಮನೆಗಳು, ಮಂದಿರಗಳು ಹಾಗೂ ನಗರಗಳ ನಿರ್ಮಾಣ ಮತ್ತು ವಿನ್ಯಾಸದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಹೇಳಿದರು.
ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ದುಷ್ಟ ಸಂಹಾರಕ್ಕಾಗಿ ವಿಷ್ಣುವಿನ ಸುದರ್ಶನ ಚಕ್ರ, ಈಶ್ವರನ ತ್ರಿಶೂಲ, ಇಂದ್ರನ ವಜ್ರಾಯುಧ ಸೇರಿದಂತೆ ದೇವತೆಗಳಿಗೆ ವಿವಿಧ ಆಯುಧಗಳನ್ನು ವಿಶ್ವಕರ್ಮರು ತಯಾರಿಸಿಕೊಟ್ಟರು ಎಂಬ ಪ್ರತೀತಿ ಇದೆ ಎಂದರು.
ಯುಗಗಳು ಕಳೆದಂತೆ ವಿಶ್ವಕರ್ಮ ಸಮುದಾಯದವರು ಮರಗೆಲಸ, ಚಿನ್ನಾಭರಣ ತಯಾರಿಕೆ, ಕಂಚು-ತಾಮ್ರದ ಉತ್ಪನ್ನಗಳು ಹಾಗೂ ಶಿಲ್ಪಕಲೆಯಂತಹ ಕಾಯಕಗಳನ್ನು ಮುಂದುವರಿಸಿಕೊಂಡು ಬಂದಿದ್ದು, ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ರೈತರಿಗೆ ಕೃಷಿ ಕಾರ್ಯಕ್ಕೆ ಅನುಕೂಲವಾಗುವ ಮರದ ಎತ್ತಿನಗಾಡಿ, ನೇಗಿಲು ಸೇರಿದಂತೆ ವಿವಿಧ ಕೃಷಿ ಉಪಕರಣಗಳನ್ನು ತಯಾರಿಸಿಕೊಟ್ಟಿರುವುದು ಅವರ ಕೌಶಲಕ್ಕೆ ಸಾಕ್ಷಿಯಾಗಿದೆ ಎಂದರು.
ಇಂದಿನ ಪೀಳಿಗೆಯೂ ಪೂರ್ವಜರ ಕಾಯಕವನ್ನು ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಸರ್ಕಾರ ಶಾಲಾ-ಕಾಲೇಜುಗಳಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ವಿಶ್ವಕರ್ಮರ ಇತಿಹಾಸ ಮತ್ತು ಕೊಡುಗೆಗಳ ಕುರಿತು ತಿಳಿಸಬೇಕು ಎಂದರು.
ಮುಖಂಡರಾದ ಮಂಜು, ಸಿದ್ದರಾಜು, ರವಿ, ಮಹಾದೇವರಾಜು, ವೆಂಕಟೇಶಚಾರಿ, ಮೂರ್ತಾಚಾರಿ, ವಿ.ಎಂ.ಜಗದೀಶ್, ವಿ.ಕೆ.ಶ್ರೀನಿವಾಸ, ಎಂ.ವೀರಪ್ಪ, ವಿಶ್ವಾಸ್, ವಿಜಯ್, ಲವ ಶ್ರೀನಿವಾಸ, ಪ್ರಸನ್ನ, ನಾರಾಯಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net