ತಂತ್ರಜ್ಞಾನ ಅನಾವರಣಕ್ಕೆ ಇಂಜಿನಿಯರ್ಸ್‌ ಮುಂದಾಗಲಿ

ಕೆ.ಆರ್.ಸಾಗರದ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಸಮರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಅಮಿತ್ ರಂಜನ್,  ಕೆ.ಜಿ.ಮಹೇಶ್, ಪಿ.ಚಂದ್ರಶೇಖರ್ ಇದ್ದರು.
ಕೆ.ಆರ್.ಸಾಗರದ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಸಮರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಅಮಿತ್ ರಂಜನ್, ಕೆ.ಜಿ.ಮಹೇಶ್, ಪಿ.ಚಂದ್ರಶೇಖರ್ ಇದ್ದರು.
Published on
ಕೆ.ಆರ್.ಸಾಗರ: ಇಂಜಿನಿಯರ್‌ಗಳು ಶ್ರದ್ಧೆಯಿಂದ ತಂತ್ರಜ್ಞಾನ ಬಳಕೆ ಮಾಡಬೇಕು. ಪ್ರತಿಭೆ ಅನಾವರಣಗೊಳಿಸುವ ಯತ್ನ ನಿಮ್ಮದಾಗಿದೆ ಎಂದು ಕೇಂದ್ರ ಜಲ ಆಯೋಗದ ನಿರ್ದೇಶಕ (ಸಿಡಬ್ಲುೃಸಿ) ಅಮಿತ್ ರಂಜನ್ ಸಲಹೆ ನೀಡಿದರು.
ಕೆ.ಆರ್.ಸಾಗರದ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದಲ್ಲಿ ಬುಧವಾರ ರಾಜ್ಯ ಸರ್ಕಾರ, ಕೇಂದ್ರ ಜಲ ಆಯೋಗ, ಡ್ರಿಪ್ ಮತ್ತು ವಿಶ್ವಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಿಯಮಟ್ಟದ ಅಣೆಕಟ್ಟೆ ಗೇಟುಗಳ ಪರಿಶೀಲನೆ ಮತ್ತು ಪರೀಕ್ಷೆ ಕುರಿತು ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು. ನಿಮ್ಮಲ್ಲಿರುವ ಸಣ್ಣ ಸಣ್ಣ ಆಲೋಚನೆಗಳು ಮುಂದೆ ದೊಡ್ಡ ಮಟ್ಟದ ತಂತ್ರಜ್ಞಾನವಾಗಲಿವೆ. ಹಾಗಾಗಿ ಪ್ರತಿಭೆ ಅನಾವರಣಗೊಳ್ಳಲಿ ಎಂದರು.
ಕೆ.ಇ.ಆರ್.ಎಸ್ ನಿರ್ದೇಶಕ ಕೆ.ಜಿ.ಮಹೇಶ್ ಮಾತನಾಡಿ, ಇಂತಹ ತರಬೇತಿಗಳಲ್ಲಿ ಇಂಜಿನಿಯರ್‌ಗಳು ಭಾಗವಹಿಸಬೇಕು. ಇದರಿಂದ ನಿಮ್ಮಲ್ಲಿನ ತಂತ್ರಜ್ಞಾನ ದ್ವಿಗುಣವಾಗುತ್ತದೆ. ನಿಮ್ಮಲ್ಲಿರುವ ಸಂದೇಹಗಳಿಗೆ ಪರಿಹಾರ ಸಿಗುತ್ತದೆ ಎಂದರು.
ತಂತ್ರಜ್ಞರು ಗೇಟುಗಳ ಭದ್ರತೆ ಮತ್ತು ಸಂರಕ್ಷಣೆ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಕೆ.ಆರ್.ಸಾಗರ ಅಣೆಕಟ್ಟೆಗೆ ಭೇಟಿ ನೀಡಿ ಗೇಟುಗಳ ವೀಕ್ಷಣೆ ಮಾಡಿ ಅಲ್ಲಿನ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದರು. ನಂತರ ಪ್ರಾಯೋಗಿಕವಾಗಿ ಕೆ.ಆರ್.ಸಾಗರ ಅಣೆಕಟ್ಟೆಯಲ್ಲಿನ ಗೇಟುಗಳ ಬದಲಾಣೆ, ಪ್ರಸ್ತುತ ಗೇಟುಗಳ ಪರಿಶೀಲನೆ ಮಾಡಿದ ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ತಂತ್ರಜ್ಞರ ಮಾಹಿತಿ ಮೂಲಕ ವಿವರಿಸಿದರು.
ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು. ಡ್ರಿಪ್‌ನ ಪ್ರಭಾರ ಮುಖ್ಯ ಇಂಜಿನಿಯರ್ ಎಚ್.ಎಸ್ ಜಯಶೀಲಾ, ದೆಹಲಿಯ ಸಿ.ಪಿ.ಎಂ.ಯು ನುರಿತ ತಂತ್ರಜ್ಞ ಪಿ.ಚಂದ್ರಶೇಖರ್, ಕಾರ್ಯಾಗಾರದ ಸಂಯೋಜಕ ಮತ್ತು ತಂತ್ರಜ್ಞ ಅಖಿಲೇಶ್ ಕುಮಾರ್, ವಿನೀತ್ ಭಾಟಿಯ, ಇಂಜಿನಿಯರಿಂಗ್ ತರಬೇತಿ ಕಾಲೇಜು ಪ್ರಾಂಶುಪಾಲ ಗಿರೀಶ್, ವಿವಿಧ ರಾಜ್ಯಗಳ ಅಣೆಕಟ್ಟೆಗಳ ಇಂಜಿನಿಯರ್‌ಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net