ಶ್ರೀರಂಗಪಟ್ಟಣ: ಚರ್ಮದ ಮೇಲೆ ತಿಳಿ, ಬಿಳಿ ಹಾಗೂ ತಾಮ್ರ ವರ್ಣದ ಮಚ್ಚೆಗಳು ಕಂಡು ಬರುವುದು, ಅವುಗಳಲ್ಲಿ ಸ್ಪರ್ಶ ಜ್ಞಾನ ಇಲ್ಲದಿದ್ದರೆ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಕುಷ್ಠರೋಗಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಇದು ಗುಣಪಡಿಸಬಹುದಾದ ಕಾಯಿಲೆಯಾಗಿದೆ ಎಂದು ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಸೂರ್ಯ ಹೇಳಿದರು.