ಸಕಲ ಜೀವರಾಶಿಗೆ ಭೂಮಿಯೇ ಆಶ್ರಯ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಹೇಳಿಕೆ

ಮಂಡ್ಯ ನಗರದ ಮಹಿಳಾ ಕಾಲೇಜಿ(ಸ್ವಾಯತ್ತ)ನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಭೂ ದಿನದ ಅಂಗವಾಗಿ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಮಂಡ್ಯ ನಗರದ ಮಹಿಳಾ ಕಾಲೇಜಿ(ಸ್ವಾಯತ್ತ)ನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಭೂ ದಿನದ ಅಂಗವಾಗಿ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನಲ್ಲಿ ಆಚರಣೆ
  • ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಿಇಎಸ್ ಕಾನೂನು ಕಾಲೇಜಿನಿಂದ ಆಯೋಜನೆ
ಮಂಡ್ಯ: ಭೂಮಿ ಸಂಪತ್ತು ರಕ್ಷಿಸಿದರೆ ಮಾನವ ಸಂಪತ್ತು ಉಳಿಯುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಹೇಳಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನ ಸಭಾಂಗಣದಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಿಇಎಸ್ ಕಾನೂನು ಕಾಲೇಜು ಮತ್ತು ಕಾನೂನು ಸೇವಾ ಘಟಕ ಮಂಡ್ಯ, ಮಹಿಳಾ ಸರ್ಕಾರಿ ಕಾಲೇಜು ಮತ್ತು ಹಿರಿಯ ವಿದ್ಯಾರ್ಥಿನಿಯರ ಸಂಘ, ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಭೂ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕಲ ಜೀವರಾಶಿಗಳಿಗೆಲ್ಲ ಆಶ್ರಯತಾಣ ಭೂಗ್ರಹ. ಪ್ರತಿ ಜೀವಿ ಉಳಿವಿಗಾಗಿ ಭೂ ಸಂಪತ್ತು ರಕ್ಷಣೆಯಾಗಬೇಕಿದೆ. ಮಾನವ ಸಂಪತ್ತು ಈ ನಿಟ್ಟಿನಲ್ಲಿ ಸನ್ನದ್ದರಾಗಬೇಕಿದೆ. ಮುಂದಿನ ಪೀಳೆಗೆಗೆ ಆರೋಗ್ಯಕರ ಭೂ ಸಂಪತ್ತನ್ನು ಬಿಟ್ಟು ಕೊಡಬೇಕಿದೆ. ಸಂವಿಧಾನದ ವಿಧಿಗಳಲ್ಲಿ ಪರಿಸರ ರಕ್ಷಣೆ ಕಾನೂನು ಇದೆ. ಭೂ ರಕ್ಷಣೆಯ ಕಾನೂನುಗಳು ಇವೆ. ಮೂಲ ಹಕ್ಕುಗಳೊಂದಿಗೆ ಕರ್ತವ್ಯಗಳನ್ನು ನೀಡಲಾಗಿದೆ. ಪ್ರತಿಯೊಬ್ಬರೂ ಪಾಲಿಸಬೇಕು. ಜೀವ ಸಂಪತ್ತು ಉಳಿವಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಸಹಾಯಕ ಪ್ರಾಧ್ಯಾಪಕ ಕೆ.ಎಸ್.ಜಯಕುಮಾರ್ ಮಾತನಾಡಿ, ನಮ್ಮ ಶಕ್ತಿ ನಮ್ಮ ಗ್ರಹ ಎಂಬ ಘೋಷವಾಕ್ಯದೊಂದಿಗೆ ವಿಶ್ವದ ಎಲ್ಲ ಕಡೆ ಭೂ ದಿನ ಆಚರಣೆ ಮಾಡಲಾಗುತ್ತಿದೆ. ಎಲ್ಲರ ಒಳಿತಿಗಾಗಿ ಎಲ್ಲರೂ ಭಾಗಿಯಾಗಬೇಕಿದೆ. ಭೂ ಗ್ರಹದಲ್ಲಿ ಹಸಿರು-ಸಂಪತ್ತುಗಳು ಉಳಿದರೆ ಜೀವ ಸಂಪತ್ತು ಉಳಿಯುತ್ತವೆ ಎನ್ನುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.
ಭೂಗೋಳಶಾಸ್ತ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ.ಎಚ್.ಎಂ.ಹೇಮಲತಾ ಅವರು ಭೂಮಿಯ ಮೇಲೆ ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುವ ಪರಿಣಾಮ ಕುರಿತು ವಿಷಯ ಮಂಡಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ವರದರಾಜೇಗೌಡ, ವಕೀಲರ ಸಂಘದ ಉಪಾಧ್ಯಕ್ಷ ಎನ್.ದೇವರಾಜು, ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕಿ ಪ್ರೊ.ಜ್ಯೋತಿ, ಪ್ರೇಮಲತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net