ನಗರದ ಹೊಸಹಳ್ಳಿ ಮಹಾಮಾಯ ಚೈಲ್ಡ್‌ಕೇರ್ ಆವರಣದಲ್ಲಿ ಪರಿಸರ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಮತೆಯ ಮಡಿಲು, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಮತ್ತು ಕ್ಯಾನ್ಸರ್ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಂಡ್ಯದಲ್ಲಿ ಹೆಚ್ಚಿನ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿವೆ. ಇದರಲ್ಲಿ ಮೂರನೇ ಹಂತದ ಕ್ಯಾನ್ಸರ್ ರೋಗ ಪ್ರಕರಣಗಳೇ ಹೆಚ್ಚಿವೆ?. ಇದಕ್ಕೆ ಮಹಿಳೆಯರು ಆರೋಗ್ಯ ಬಗ್ಗೆೆ ವಹಿಸುವ ನಿರ್ಲಕ್ಷ್ಯವೇ ಕಾರಣ. ಕ್ಯಾನ್ಸರ್ ಎನ್ನುವುದನ್ನು ವಾಸಿ ಮಾಡದಂತಹ ರೋಗವೇನೂ ಅಲ್ಲ. ಸೂಕ್ತ ಚಿಕಿತ್ಸೆ ಪಡೆದು ರೋಗ ಗುಣ ಪಡಿಸಬಹುದು. ಇಷ್ಟಿದ್ದರೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.