ಖಾಸಗಿ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆ ಉಳಿಸಿ

ಮದ್ದೂರು ನಗರದ ಎಚ್‌ಕೆವಿ ನಗರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನಗರಸಭೆ ಮಾಜಿ ಸದಸ್ಯ ಎಸ್.ಮಹೇಶ್ ಅಗತ್ಯ ಪರಿಕರಗಳು ಮತ್ತು ಸಮವಸ್ತ್ರ ವಿತರಿಸಿದರು. ಎಸ್.ಮಹದೇವಿ, ಮೆಹಬೂಬಿನ್, ಪವಿತ್ರಾ, ಶ್ರುತಿ, ವೀರೇಶ್, ಎನ್.ಪಂಚಲಿಂಗಯ್ಯ ಇದ್ದರು.
ಮದ್ದೂರು ನಗರದ ಎಚ್‌ಕೆವಿ ನಗರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನಗರಸಭೆ ಮಾಜಿ ಸದಸ್ಯ ಎಸ್.ಮಹೇಶ್ ಅಗತ್ಯ ಪರಿಕರಗಳು ಮತ್ತು ಸಮವಸ್ತ್ರ ವಿತರಿಸಿದರು. ಎಸ್.ಮಹದೇವಿ, ಮೆಹಬೂಬಿನ್, ಪವಿತ್ರಾ, ಶ್ರುತಿ, ವೀರೇಶ್, ಎನ್.ಪಂಚಲಿಂಗಯ್ಯ ಇದ್ದರು.
Published on
ಮದ್ದೂರು: ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹ ಬದಿಗೊತ್ತಿ, ತಮ್ಮ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಬೇಕೆಂದು ನಗರಸಭೆ ಮಾಜಿ ಸದಸ್ಯ ಎಸ್.ಮಹೇಶ್ ಮನವಿ ಮಾಡಿದರು.
ನಗರದ ಎಚ್.ಕೆ.ವಿ. ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್‌ಬುಕ್, ಅಗತ್ಯ ಪರಿಕರ ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳನ್ನು ಮರೆಯುತ್ತಿರುವುದು ವಿಷಾದನೀಯ. ಇದೇ ಪ್ರವೃತ್ತಿ ಮುಂದುವರಿದ್ದಲ್ಲಿ ಮುಂದೊಂದು ದಿನ ಸರ್ಕಾರಿ ಶಾಲೆಗೆ ಬೀಗ ಹಾಕುವ ದಿನ ಬಹಳ ದೂರವಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯ ಪುಸ್ತಕ, ಶೂ, ಬಿಸಿಯೂಟ, ಪ್ರೋತ್ಸಾಹಧನ ಮತ್ತು ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದರೂ, ರಾಜ್ಯಾದ್ಯಂತ ಹಲವಾರು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ಆತಂಕಕಾರಿ ವಿಚಾರವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡದಿದ್ದಲ್ಲಿ ಶಾಲೆ ಮುಚ್ಚುವುದು ಗ್ಯಾರಂಟಿಯಾಗಿದ್ದು, ಇದನ್ನರಿತು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವಂತೆ ಕೋರಿದರು.
ಕಳೆದ ಸಾಲಿನಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಚನ್ನಪ್ಪ ಮತ್ತು ಉಪಾಧ್ಯಕ್ಷ ಸಿ.ಮಹೇಶ್ ಅವರು ಉತ್ತಮ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ನೂತನ ಎಸ್‌ಡಿಎಂಸಿ ಸದಸ್ಯರು ಅಭಿನಂದಿಸಿದರು. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಸಮವಸ್ತ್ರ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷೆ ಎಸ್.ಮಹದೇವಿ, ಉಪಾಧ್ಯಕ್ಷೆ ಮೆಹಬೂಬಿನ್, ಸದಸ್ಯರಾದ ಪವಿತ್ರಾ, ಶ್ರುತಿ, ವೀರೇಶ್, ಎಂಪಿಸಿಎಸ್ ಮಾಜಿ ಅಧ್ಯಕ್ಷ ಎನ್.ಪಂಚಲಿಂಗಯ್ಯ, ಮುಖಂಡರಾದ ಸಿದ್ದರಾಜು, ಆದರ್ಶ, ಅಮಾವಾಸ್ಯೆ, ಮುಖ್ಯಶಿಕ್ಷಕ ಪ್ರಸನ್ನ, ಶಿಕ್ಷಕರಾದ ಗಂಗರಾಜು, ಶ್ರುತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net