ಮಂಡ್ಯ: ರೈತರು ಗುಣಮಟ್ಟದ ರಾಗಿಯನ್ನು ಪೂರೈಕೆ ಮಾಡಬೇಕು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಮನವಿ ಮಾಡಿದರು.
ನಗರದ ಕಲ್ಲಹಳ್ಳಿ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಗಿ ಪೂರೈಕೆ ಮಾಡುವ ವಿಚಾರದಲ್ಲಿ ರೈತರು ಗೊಂದಲ ಮಾಡಿಕೊಳ್ಳುವುದು ಬೇಡ. ಮೂರು ತಿಂಗಳ ಕಾಲಾವಕಾಶವಿದೆ. ಕನಿಷ್ಟ ಬೆಂಬಲ ಯೋಜನೆಯಡಿ ಸರ್ಕಾರ ರಾಗಿ ಖರೀದಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ರಾಗಿಯನ್ನು ಸರಬರಾಜು ಮಾಡಬೇಕು. ಇದನ್ನು ಮುಂದೆ ಪಡಿತರ ವಿತರಣೆ ಯೋಜನೆಯಡಿ ತಮಗೆ ಹಾಗೂ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳದ ಇಲಾಖೆ ಉಪನಿರ್ದೇಶಕರು ಪ್ರತೀಕ್ ಹೆಗ್ಡೆ, ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ಮನೋಹರ್, ಆಹಾರ ನಿರೀಕ್ಷಕ ರೇವಣ್ಣ, ಖರೀದಿ ಅಧಿಕಾರಿ ಶ್ರುತಿ ಇತರರಿದ್ದರು.