ಲಕ್ಷ್ಮೀದೇವಿ ರಥೋತ್ಸವ

ಕಿಕ್ಕೇರಿ ಸಮೀಪದ ಭಾರತೀಪುರ ಗ್ರಾಮದಲ್ಲಿ ಗ್ರಾಮದೇವತೆ ಲಕ್ಷ್ಮೀದೇವಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಕಿಕ್ಕೇರಿ ಸಮೀಪದ ಭಾರತೀಪುರ ಗ್ರಾಮದಲ್ಲಿ ಗ್ರಾಮದೇವತೆ ಲಕ್ಷ್ಮೀದೇವಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on
ಕಿಕ್ಕೇರಿ: ಸಮೀಪದ ಭಾರತೀಪುರ ಗ್ರಾಮದ ಲಕ್ಷ್ಮೀದೇವಿ ಅಮ್ಮನವರ ಜಾತ್ರೆಗೆ ಅಧಿಕವಾಗಿ ಭಕ್ತಸಾಗರ ಹರಿದುಬಂದಿತು.
ಬಿರು ಬಿಸಿಲನ್ನು ಲೆಕ್ಕಿಸದೆ ಶನಿವಾರ ಭಕ್ತರು ಭಾಗವಹಿಸಿದ್ದರು. ಇಳಿಹೊತ್ತಿನ ಭಾಸ್ಕರನ ಹೊಂಗಿರಣದ ಪ್ರಕಾಶಮಾನದಲ್ಲಿ ಅಮ್ಮನವರ ರಥವು ವಿಜೃಂಭಣೆಯಿಂದ ರಥಬೀದಿಯಲ್ಲಿ ಸಾಗಿತು.
ದಾರಿಯುದ್ದಕ್ಕೂ ಲಕ್ಷ್ಮೀದೇವಿಗೆ ಉಘೇ, ಉಘೇ ಎಂದು ಜಯಘೋಷ ಕೂಗುತ್ತ ರಥವನ್ನು ಎಳೆದರು. ಭಕ್ತರು ಹಣ್ಣು ಧವನ ಎಸೆಯುವ ಮೂಲಕ ಭಕ್ತಿ ಮೆರೆದು.
ರಥೋತ್ಸವಕ್ಕೂ ಮುನ್ನ ಧ್ವಜಪಟ ಪೂಜೆ, ಕಳಶ ಪೂಜೆ, ಗ್ರಾಮದ ಅಷ್ಟದಿಕ್ಕುಗಳಿಗೆ ಬಲಿಪೂಜೆ, ಧೂಪ ಪೂಜೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net