ಕಾಯಕ ಕಲಿಸಿದವರನ್ನು ಸದಾ ಸ್ಮರಿಸಿ

ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಅನ್ನದಾನ ನೆರವೇರಿಸಿದರು. ಮುಖಂಡರಾದ ಎನ್.ರಾಮಚಂದ್ರು, ರಾಜು, ಸುರೇಶ್, ವೆಂಕಟಪ್ಪ, ನಂಜುಂಡಪ್ಪ, ನಾಗೇಂದ್ರ, ನಾಗರಾಜು ಇದ್ದರು.
ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಅನ್ನದಾನ ನೆರವೇರಿಸಿದರು. ಮುಖಂಡರಾದ ಎನ್.ರಾಮಚಂದ್ರು, ರಾಜು, ಸುರೇಶ್, ವೆಂಕಟಪ್ಪ, ನಂಜುಂಡಪ್ಪ, ನಾಗೇಂದ್ರ, ನಾಗರಾಜು ಇದ್ದರು.
Published on
ಶ್ರೀರಂಗಪಟ್ಟಣ : ಕಾಯಕ ಕಲಿಸಿ ಬದುಕಿಗೆ ದಾರಿ ತೋರಿದವರೇ ಗುರುಗಳು ಎಂದು ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಎನ್.ರಾಮಚಂದ್ರು ತಿಳಿಸಿದರು.
ಪಟ್ಟಣದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮೇಸ್ತ್ರಿಗಳು ಹಾಗೂ ಕಾರ್ಮಿಕರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲಸ ನೀಡಿದವರನ್ನು ನಿತ್ಯ ಸ್ಮರಣೆ ಮಾಡಬೇಕು. ಇಂಥ ಸ್ಮರಣೆಯೇ ಕಾರ್ಮಿಕ ದಿನಾಚರಣೆಗೆ ಮುಖ್ಯ ಸ್ಫೂರ್ತಿ ಎಂದು ಹೇಳಿದರು.
ಪಟ್ಟಣದಲ್ಲಿ ಇರುವ ನೂರಾರು ಕುಟುಂಬಗಳು ಕಟ್ಟಡ ನಿರ್ಮಾಣ ಕಾಯಕ ಕಲಿತು ಸಾವಿರಾರು ಮನೆಗಳನ್ನು ನಿರ್ಮಿಸಿವೆ. ನಂಬಿಕೆ ಗಳಿಸಿ ತಮ್ಮ ಜೀವನವನ್ನು ರೂಪಿಸಿಕೊಂಡಿವೆ. ಪ್ರಾಮಾಣಿಕ ಹಾದಿಯಲ್ಲಿ ಶ್ರಮಿಸಿ ಅನ್ನ ತಿನ್ನುವ ಬದುಕ ಕಲಿಸಿಕೊಟ್ಟ ಈ ಹಿರಿಯರನ್ನು ಮರೆಯಬಾರದು. ಅವರು ಹಾಕಿಕೊಟ್ಟ ಮಾರ್ಗ, ಬುನಾದಿ ಹಾಗೂ ತೋರಿಸಿಕೊಟ್ಟ ನೀತಿಯಲ್ಲಿ ಬದುಕುತ್ತಿದ್ದೇವೆ. ನಮ್ಮಂಥವರ ಬದುಕಿಗೆ ಪ್ರೇರಣೆಯಾದ ಗಣ್ಯರನ್ನು ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಸ್ಮರಣೆ ಮಾಡಬೇಕು. ಸಮಾನ ಮನಸ್ಸಿನ ಕಾರ್ಮಿಕರು ಸನ್ಮಾರ್ಗದಲ್ಲೇ ನಡೆಯಬೇಕು ಎಂದರು.
ಇದೇ ಸಂದರ್ಭ ಪಟ್ಟಣದ ದಿ. ಕಂಟ್ರಾೃಕ್ಟರ್ ಕೃಷ್ಣಪ್ಪ ಹಾಗೂ ಮೇಸ್ತ್ರಿ ನಾಗರಾಜು ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪನಮನ ಸಮರ್ಪಿಸಿದರು. ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಮುಖಂಡರಾದ ರಾಜು, ಸುರೇಶ್, ವೆಂಕಟಪ್ಪ, ನಂಜುಂಡಪ್ಪ, ನಾಗೇಂದ್ರ, ನಾಗರಾಜು, ಕ್ಯಾಂಟಿನ್ ಕೃಷ್ಣಪ್ಪ, ಗೋಪಾಲ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net