ಗಸ್ತಿನಲ್ಲಿದ್ದ ಸಂದರ್ಭದ ಲಾರಿಯೊಂದು ಹುಲಿಕೆರೆ ಗ್ರಾಮದ ಮೈಸೂರು ರಸ್ತೆಯಲ್ಲಿ ಅತಿವೇಗವಾಗಿ ಕಲ್ಲು ತುಂಬಿಕೊಂಡು ಬರುತ್ತಿರುವುದನ್ನು ಕಂಡು ಪೊಲೀಸರು ವಾಹನ ತಡೆದು ದಾಖಲಾತಿ ಪರಿಶೀಲನೆ ಮಾಡಿದಾಗ ಕಲ್ಲು ಸಾಗಣೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಇರುವುದು ಹಾಗೂ ಲಾರಿ ಎಫ್‌ಸಿ ಸೇರಿದಂತೆ ದಾಖಲಾತಿ ಸಮರ್ಪಕವಾಗಿ ಇಲ್ಲದ ಕಾರಣ ವಶಕ್ಕೆ ಪಡೆದ ಪಿಎಸ್ಸೈ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಲಾರಿ ಮಾಲೀಕ ತನ್ನ ಲಾರಿ ಬಿಡುವಂತೆ ಠಾಣೆ ಆವರಣದಲ್ಲಿ ವಿಷ ಕುಡಿದು ಬೆದರಿಕೆ ಮಾಡುವ ಯತ್ನ ಮಾಡಿದ್ದು, ಈ ಸಂದರ್ಭದಲ್ಲಿ ಅಲ್ಲಿದ್ದ ಕರ್ತವ್ಯ ನಿರತ ಪೋಲಿಸರು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಲಾರಿ ಮಾಲೀಕನ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.