110 ಅಡಿ ಗಡಿ ತಲುಪಿದ ಕೆ .ಆರ್.ಸಾಗರ ಅಣೆಕಟ್ಟೆ

ಕೆ.ಆರ್.ಸಾಗರ ಜಲಾಶಯದಲ್ಲಿ ಗುರುವಾರ ಕಂಡುಬಂದ ನೀರಿನ ಮಟ್ಟ.
ಕೆ.ಆರ್.ಸಾಗರ ಜಲಾಶಯದಲ್ಲಿ ಗುರುವಾರ ಕಂಡುಬಂದ ನೀರಿನ ಮಟ್ಟ.
Published on

ಕೆ.ಆರ್.ಸಾಗರ:

ಕಾವೇರಿ ಜಲಾನಯನ ಪ್ರದೇಶದಲ್ಲಿ ಹಲವು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗತೊಡಗಿದ್ದು ಅಣೆಕಟ್ಟೆಗೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಇಳಿಮುಖವಾಗಿದೆ. ಹಾಗಾಗಿ ಅಣೆಕಟ್ಟೆ ಭರ್ತಿಯಾಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ತಮ್ಮ ಬೆಳೆಗೆ ಸಂಪೂರ್ಣ ನೀರು ಸಿಗದಿರುವ ಆತಂಕ ಮನೆ ಮಾಡಿದೆ.

ಎರಡು ದಿನಗಳ ಹಿಂದೆ 8 ಸಾವಿರ ಕ್ಯೂಸೆಕ್ ಇದ್ದ ಒಳಹರಿವು ಗುರುವಾರ ಸಂಜೆಗೆ 4,185 ಕ್ಯೂಸೆಕ್‌ಗೆ ಇಳಿದಿದೆ. 124.80 ಗರಿಷ್ಠ ಮಟ್ಟದ ಅಣೆಕಟ್ಟೆ ನೀರಿನ ಮಟ್ಟ ಗುರುವಾರ 109.80 ಅಡಿಗೆ ತಲುಪಿದೆ. ಪ್ರಸ್ತುತ ಒಳಹರಿವು 4,185 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಹೊರಹರಿವು 2,310 ಕ್ಯೂಸೆಕ್, 31.521 ಟಿಎಂಸಿ ನೀರಿನ ಸಂಗ್ರವಿದೆ.
ಇದರಲ್ಲಿ _27 ಟಿಎಂಸಿ ನೀರು ಬಳಸಬಹುದಾಗಿದೆ, ಮುಂಗಾರು ಹಿಂಗಾರು ಸೇರಿ, ಕಾವೇರಿ ಪ್ರಾಂತ್ಯದ ಬೆಳೆಗಳಿಗೆ, ಕುಡಿಯುವ ನೀರು, ವಾಣಿಜ್ಯ ಬಳಕೆಗೆ ಹಾಗೂ ಅವಿಯಾಗುವ ನೀರು ಸೇರಿ ಸುಮಾರು 50 ಟಿಎಂಸಿ ನೀರು ಬೇಕಾಗಿದೆ.
ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 124.36 ಅಡಿ ಇದ್ದು, ಒಳಹರಿವು 11,442 ಕ್ಯೂಸೆಕ್, ಹೊರಹರಿವು 11,740 ಕ್ಯೂಸೆಕ್ ದಾಖಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net